ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಅವರಿಗೆ ಜೆಡಿಎಸ್ನ ಯುವ ಘಟಕದ ಹೊಣೆಯನ್ನು ನೀಡಲಾಗಿದೆ. ಈ ಸಂದರ್ಭವನ್ನು ತಾತನ ಕಾಲಿಗೆ ಬಿದ್ದು ನಿಖಿಲ್ ಆಶೀರ್ವಾದ ಪಡಕೊಳ್ಳುವ ಮೂಲಕ ನಿಖಿಲ್ ಸ್ವೀಕರಿಸಿದರು. ಅದೇವೇಳೆ, ಎಚ್.ವಿಶ್ವನಾಥ್ ಅವರ ರಾಜೀನಾಮೆಯಿಂದ ತೆರವಾಗಿರುವ ರಾಜ್ಯಾಧ್ಯಕ್ಷ ಹುದ್ದೆಗೆ ಸಕಲೇಶಪುರದ ಶಾಸಕ ಎಚ್.ಕೆ.ಕುಮಾರಸ್ವಾಮಿ ಲಭ್ಯವಾಗಿದ್ದು, ಕಾರ್ಯಾಧ್ಯಕ್ಷರನ್ನಾಗಿ ಮಧು ಬಂಗಾರಪ್ಪ ಅವರನ್ನು ನೇಮಿಸಲಾಗಿದೆ ವರದಿಗಳು ತಿಳಿಸಿವೆ.
ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಸಕಲೇಶಪುರದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಮತ್ತು ಇವ್ರು ದೇವೇಗೌಡರಿಗೆ ಆಪ್ತರಾಗಿದ್ದಾರೆ. ಇದೇವೇಳೆ, ರಾಜ್ಯಾಧ್ಯಕ್ಷ ಸ್ಥಾನದ ಜೊತೆಗೆ ಪಕ್ಷ ಸಂಘಟನೆಗಾಗಿ ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿಸಲಾಗಿದ್ದು, ಹಿಂದುಳಿದ ವರ್ಗದ ಮತ ಸೆಳೆಯಲು ಮಧು ಬಂಗಾರಪ್ಪಗೆ ಆ ಸ್ಥಾನ ನೇಮಕ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಯುವ ಘಟಕದ ಕಾರ್ಯದರ್ಶಿಯಾಗಿ ಶರಣಗೌಡ ಕಂದಕೂರು ಅವರನ್ನು ನೇಮಕ ಮಾಡಲಾಗಿರುವುದಾಗಿ ಮೂಲಗಳು ತಿಳಿಸಿವೆ.












