ಯುದ್ಧ: ಅಮೆರಿಕ ಪ್ರತಿದಿನ ತೆರುತ್ತಿರುವ ಬೆಲೆ ಎಷ್ಟು ಗೊತ್ತೆ?

0
416

ಸನ್ಮಾರ್ಗ ವಾರ್ತೆ

ಅಂತಾರಾಷ್ಟ್ರೀಯ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಇರಾನಿನ ಮೇಲೆ ಯುದ್ಧಕ್ಕಿಳಿದ ಅಮೆರಿಕ ಇದಕ್ಕಾಗಿ ಪ್ರತಿದಿನ 8,455 ಕೋಟಿ ರೂಪಾಯಿಯನ್ನು ಖರ್ಚು ಮಾಡುತ್ತಿದೆ ಎಂಬ ವರದಿ ಬಹಿರಂಗವಾಗಿದೆ. ಫೆಬ್ರವರಿ 28ರಂದು ಅಮೆರಿಕ ಪ್ರಾರಂಭಿಸಿರುವ ಯುದ್ಧಕ್ಕೆ ಇದೀಗ ಒಂದು ತಿಂಗಳು ತುಂಬಿದ್ದು, ಅಮೇರಿಕಾ ಪ್ರತಿದಿನ ಭಾರಿ ಪ್ರಮಾಣದಲ್ಲಿ ಈ ಯುದ್ಧಕ್ಕಾಗಿ ಬೆಲೆ ತೆರುತ್ತಿದೆ ಎಂದು ವರದಿಯಾಗಿದೆ.

ಈಗಾಗಲೇ ಎರಡು ಲಕ್ಷದ 63 ಸಾವಿರ ಕೋಟಿ ರೂಪಾಯಿಯನ್ನು ಅಮೆರಿಕ ಈ ಯುದ್ಧಕ್ಕೆ ಖರ್ಚು ಮಾಡಿದೆ ಎಂದು ವರದಿಯಾಗಿದೆ.

ಇದಕ್ಕೆ ಹೊರತಾಗಿ ಅಮೆರಿಕಾದ ಸೇನಾ ಸ್ಥಾವರಗಳು, ಪ್ರತಿರೋಧ ವ್ಯವಸ್ಥೆಗಳಿಗೆ ಇರಾನ್ ದಾಳಿ ನಡೆಸಿದ್ದು ಅಮೆರಿಕಾದ ನಷ್ಟಕ್ಕೆ ಇನ್ನಷ್ಟು ನಷ್ಟವನ್ನು ಸೇರಿಸಿದೆ. ಅಲ್ಲದೆ ಅಮೆರಿಕಾದ ಹಲವು ಯುದ್ಧವಿಮಾನಗಳನ್ನು ಇರಾನ್ ಉರುಳಿಸಿದೆ. ಡ್ರೋನ್ ಗಳನ್ನು ಉರುಳಿಸಿದೆ.

ಯುದ್ಧವಿರಾಮಕ್ಕೆ ಪ್ರಯತ್ನಗಳು ನಡೆಯುತ್ತಿದ್ದರೂ ಅವು ಯಾವುವೂ ಫಲ ಕಾಣುತ್ತಿಲ್ಲ. ಯುದ್ಧ ಮುಂದುವರಿಯಲಿದೆ ಎಂಬ ಸೂಚನೆ ಸಿಗುತ್ತಿದೆ. ಈ ಕಾರಣದಿಂದ ಪ್ರತಿ ಸೆಕೆಂಡಿಗೂ 9 ಕೋಟಿ 80 ಲಕ್ಷ ರೂಪಾಯಿ ಅಮೆರಿಕಕ್ಕೆ ನಷ್ಟವಾಗುತ್ತಿದೆ.