ಸನ್ಮಾರ್ಗ ವಾರ್ತೆ
ಇರಾನಿನಲ್ಲಿ ಅಣ್ವಸ್ತ್ರವನ್ನು ಪ್ರಯೋಗಿಸುವುದಕ್ಕೆ ಬೇಕಾದ ಸಿದ್ಧತೆಗಳಿಗೆ ವಿಶ್ವಸಂಸ್ಥೆ ವೇದಿಕೆ ಒದಗಿಸುತ್ತಿದೆ ಎಂದು ವಿಶ್ವಸಂಸ್ಥೆಯ ಪ್ರತಿನಿಧಿ ಮೊಹಮ್ಮದ್ ಅಸಫ್ ಆರೋಪಿಸಿದ್ದು ವಿಶ್ವಸಂಸೆಯ ಪ್ರತಿನಿಧಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎಕ್ಸ್ ಜಾಲತಾಣದಲ್ಲಿ ಅವರು ಈ ಆರೋಪವನ್ನು ಮಾಡಿದ್ದು, ವಿಶ್ವಸಂಸ್ಥೆಯಲ್ಲಿರುವ ಕೆಲವರು ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ ಮತ್ತು ಕಾರ್ಯಪ್ರವೃತ್ತವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ತೆಹರಾನ್ ನಗರದ ಚಿತ್ರವನ್ನು ಹಂಚಿಕೊಂಡು ಅವರು ಎಕ್ಸ್ ಖಾತೆಯಲ್ಲಿ ಹೀಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಯುದ್ಧದಾಹಿಗಳಾದ ಕೆಲವರು ಬಾಂಬು ಹಾಕುವುದಕ್ಕೆ ಬಯಸುವ ನಗರವಾಗಿದೆ. ಇದು ಮರುಭೂಮಿಯಲ್ಲ. ಒಂದು ಕೋಟಿಯಷ್ಟು ಜನರು ವಾಸಿಸುವ ನಗರವಾಗಿದೆ. ಇಲ್ಲಿ ಸಾಮಾನ್ಯ ಜನರು ಮಕ್ಕಳು ಮತ್ತು ಅವರ ಸಾಕು ಪ್ರಾಣಿಗಳಿವೆ . ವಾಷಿಂಗ್ಟನ್ ನಲ್ಲಿಯೋ ಲಂಡನ್ನಿನಲ್ಲಿಯೋ ಪ್ಯಾರಿಸ್ ನಲ್ಲಿಯೋ ಅಣ್ವಸ್ತ್ರವನ್ನು ಪ್ರಯೋಗಿಸುವುದನ್ನು ಒಮ್ಮೆ ಊಹಿಸಿ ನೋಡಿ. ಯುದ್ಧ ಬಯಸುವುದಕ್ಕೆ ನಿಮಗೆ ಹೇಗೆ ಸಾಧ್ಯವಾಗುತ್ತಿದೆ? ನೀವು ರೋಗಿಗಳು ಎಂದು ಅವರು ಬರೆದಿದ್ದಾರೆ.












