ಸ್ಮೃತಿ ಇರಾನಿಯನ್ನು ಬಳಸಿ, ಎಸೆದ ಬಿಜೆಪಿ

0
646

✍️ ಮಿಷಲ್

ಮೇ 9 ರಂದು ಕೊಲ್ಕತ್ತಾದ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆದ ಕಾರ್ಯಕ್ರಮದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ. 20 ರಿಂದ 25 ಸೆಕೆಂಡುಗಳ ಈ ಪುಟ್ಟ ವಿಡಿಯೋ ದಲ್ಲಿ ಪ್ರಧಾನಿ ಇದ್ದಾರೆ. ಸ್ಮೃತಿ ಇರಾನಿ ಇದ್ದಾರೆ. ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಮತ್ತು ನಟ ಮಿಥುನ್ ಚಕ್ರವರ್ತಿ ಇದ್ದಾರೆ.

ವಿಷಯ ಏನಂದರೆ ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಮಂತ್ರಿ ಆಗಿ ಸುವೆಂದು ಅಧಿಕಾರಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭ ಇದು. ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಕ್ಷದ ನಾಯಕರನ್ನು ಅಭಿನಂದಿಸುತ್ತಾರೆ ನೇರವಾಗಿ ಮೀಥುನ್ ಚಕ್ರವರ್ತಿ ಅವರ ಬಳಿಗೆ ಹೋಗಿ ಅವರ ಭುಜಕ್ಕೆ ತಟ್ಟಿ ಅಭಿನಂದಿಸುತ್ತಾರೆ. ಆ ಸಮಯದಲ್ಲಿ ಮಿಥುನ್ ಚಕ್ರವರ್ತಿ ಅವರ ಪಕ್ಕವೇ ಸ್ಮೃತಿ ಇರಾನಿ ಇದ್ದರು. ಮಿಥುನ್ ಚಕ್ರವರ್ತಿಯನ್ನು ಅಭಿನಂದಿಸಲು ಪ್ರಧಾನಿ ಹತ್ತಿರ ಬರುತ್ತಿದ್ದಂತೆಯೇ ಸ್ಮೃತಿ ಇರಾನಿ ಎರಡೂ ಕೈಮುಗಿದು ನಮಸ್ಕಾರ ಹೇಳುತ್ತಾರೆ. ಆದರೆ ಪ್ರಧಾನಿಯಿಂದ ಅದಕ್ಕೆ ಪ್ರತಿಕ್ರಿಯೆ ಸಿಗುವುದಿಲ್ಲ.. ಸ್ಮೃತಿ ಇರಾನಿ ಅವರು ಪ್ರಧಾನಿಯ ಮುಖವನ್ನೇ ನೋಡುತ್ತಿರುತ್ತಾರೆ. ಮತ್ತೆ ನಮಸ್ಕಾರ ಮಾಡುತ್ತಾರೆ. ಆದರೆ ಈ ಬಾರಿ ಹಿಂದಿನಷ್ಟು ಕಾನ್ಫಿಡೆನ್ಸ್ ಈ ನಮಸ್ಕಾರದಲ್ಲಿ ಇರುವುದಿಲ್ಲ. ಕೊನೆಗೂ ಸ್ಮೃತಿ ಇರಾನಿ ಅವರನ್ನು ಮಾತಾಡಿಸದೆ ಮತ್ತು ಅವರ ಮುಖವನ್ನು ನೋಡದೆ ಪ್ರಧಾನಿ ಬೇರೆಡೆಗೆ ಹೊರಟು ಹೋಗುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಭಾರಿ ಪ್ರಮಾಣದಲ್ಲಿ ಹಂಚಿಕೊಳ್ಳಲಾಗಿದೆ. ಒಂದು ಕಾಲದಲ್ಲಿ ಪ್ರಧಾನಿ ಸಚಿವ ಸಂಪುಟದ ಪ್ರಮುಖ ಸಚಿವೆಯಾಗಿದ್ದ ಸ್ಮೃತಿ ಇರಾನಿಯನ್ನು ಈಗ ಪ್ರಧಾನಿ ಲೆಕ್ಕಿಸುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗಿದೆ. ಡಿ ಎನ್ ಎ, ಲೋಕ ಮತ್ ಮುಂತಾದ ಮುಖ್ಯ ವಾಹಿನಿಯ ಮೀಡಿಯಾಗಳ ಸೋಶಿಯಲ್ ಪುಟಗಳಲ್ಲೂ ಈ ವಿಡಿಯೋ ಕ್ಲಿಪ್ ಅನ್ನು ಬಳಸಲಾಗಿದೆ.

ಅಮೇಥಿ ಚುನಾವಣೆಯ ಸೋಲಿನ ಬಳಿಕ ಸ್ಮೃತಿ ಇರಾನಿ ಕಡೆಗಣಿಗೆ ಒಳಗಾಗಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಒಂದು ಕಾಲದ ಪ್ರಧಾನಿಯ ಫೇವರೆಟ್ ಈಗ ದಯನೀಯ ಸ್ಥಿತಿಗೆ ತಲುಪಿದ್ದಾರೆ ಎಂದು ಹೇಳಿದವರಿದ್ದಾರೆ.

ಸ್ಮೃತಿ ಇರಾನಿ ಅವರು 2014ರಿಂದ 2024ರ ವರೆಗೆ ಮೋದಿ ಸಚಿವ ಸಂಪುಟದ ಪ್ರಮುಖ ಆಕರ್ಷಣೆಯಾಗಿದ್ದರು , ಹಲವು ಖಾತೆಗಳನ್ನು ಅವರು ನಿಭಾಯಿಸಿದ್ದರು. ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ, ಜವಳಿ ಖಾತೆ, ಮಾಹಿತಿ ಮತ್ತು ಪ್ರಸಾರ ಖಾತೆಯನ್ನು 2014ರಿಂದ 19ರ ನಡುವೆ ಅವರು ನಿಭಾಯಿಸಿದ್ದರು. 2019ರ ಬಳಿಕ ಅವರು ಮಹಿಳಾ ಮತ್ತು ಮಕ್ಕಳ ಖಾತೆಯನ್ನು ನಿಭಾಯಿಸಿದ್ದರು. ಅಲ್ಪಸಂಖ್ಯಾತರ ಕಲ್ಯಾಣ ಖಾತೆಯನ್ನು ಕೂಡ ಅವರು ನಿಭಾಯಿಸಿದ್ದರು.

ಮನಮೋಹನ್ ಸಿಂಗ್ ಸರಕಾರದ ವಿರುದ್ಧ ಅವರ ಸಿಲಿಂಡರ್ ಪ್ರತಿಭಟನೆಯ ಚಿತ್ರ ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹರಿದಾಡುತ್ತಿದೆ. ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡುವುದಕ್ಕೆ ಬಿಜೆಪಿ ಅವರನ್ನು ಧಾರಾಳ ಬಳಸಿಕೊಂಡಿದೆ. ಆದರೆ ಚುನಾವಣಾ ಸೋಲಿನ ಬಳಿಕ ಅವರನ್ನು ಬಿಜೆಪಿ ನಿರ್ಲಕ್ಷಿಸುತ್ತಿದೆ ಅನ್ನುವ ಅಭಿಪ್ರಾಯ ಇದೆ, ಮೋದಿ ಅವರ ವರ್ತನೆ ಅದನ್ನು ದೃಢೀಕರಿಸಿದೆ.