ಐಎಂಎ ವಂಚನೆ: ಮುಸ್ಲಿಂ ಬೋಧಕ ಉಮರ್ ಶರೀಫ್ ಬಂಧನ; ನ್ಯಾಯಾಂಗ ವಶಕ್ಕೆ

0
799

ಸನ್ಮಾರ್ಗ ಜು. 19, 2019

ಬೆಂಗಳೂರು, ಜು. 19: ಐಎಂಎ ಜ್ಯುವೆಲ್ಲರಿ ಹೂಡಿಕೆದಾರರಿಗೆ ವಂಚಿಸಿದ ಪ್ರಕರಣದಲ್ಲಿ ಮುಸ್ಲಿಂ ಬೋಧಕರನ್ನು ಸಿಟ್ ಪೊಲೀಸರು ಬಂಧಿಸಿದ್ದಾರೆ. ಇವರು ಐಎಂಎ ಜ್ಯುವೆಲ್ಲರಿ ಮಾಲಕನ ಪರ ಪ್ರಚಾರದಲ್ಲಿ ಭಾಗಿಯಾಗಿದ್ದರು ಮತ್ತು ಇದಕ್ಕಾಗಿ ಲಕ್ಷಾಂತರ ಹಣವನ್ನು ಪಡೆದಿದ್ರು ದ ಎಂದು ಪೊಲೀಸರು ತಿಳಿಸಿದ್ದಾರೆ.

ಉಮರ್ ಶರೀಫ್ ಧಾರ್ಮಿಕ ಬೋಧಕನ ರೂಪದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಆದರೆ ಐಎಂಎಗೆ ಜಾಹೀರಾತು ಪ್ರಚಾರಕನ ರೂಪದಲ್ಲಿ ವರ್ತಿಸಿ, ಹಲವರು ಐಎಂಎ ಜ್ಯುವೆಲ್ಲರಿಯಲ್ಲಿ ನಂಬಿಕೆ ಹುಟ್ಟುವಂತೆ ಮಾಡಿದ್ದಾರು ಎಂದು ಆರೋಪಿಸಲಾಗುತ್ತಿದೆ. ಮನ್ಸೂರ್ ಖಾನ್‍ನಿಂದ ವಾಹನ ಮತ್ತು 60 ಲಕ್ಷ ಹಣ ಪಡೆದಿದ್ದಾರು ಎನ್ನಲಾಗಿದ್ದು, ಉಮರ್ ಶರೀಫ್‍ನನ್ನು ನಿನ್ನೆ ಬಂಧಿಸಿ ಕೋರ್ಟಿಗೆ ಹಾಜರು ಪಡಿಸಲಾಗಿದ್ದು ಎಸ್‍ಐಟಿ ಪೊಲೀಸರು ಹೆಚ್ಚಿನ ವಿಚಾರಣೆಗೆ ಗುರಿಪಡಿಸಲು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಮಾಜಿ ಸಚಿವ ರೋಶನ್ ಬೇಗ್‍ ಗೆ 400 ಕೋಟಿ ರೂಪಾಯಿ ಕೊಟ್ಟಿದ್ದೇನೆ ಎಂದು ಐಎಂಎ ಮಾಲಕ ಆರೋಪ ಹೊರಿಸಿದ್ದಾನೆ. ಈ ಪ್ರಕರಣದಲ್ಲಿಯೂ ಎಸ್‍ಐಟಿ ತನಿಖೆ ನಡೆಸುತ್ತಿದೆ.