ಪ್ರವಾದಿ ಮುಹಮ್ಮದ್(ಸ)ರ ಬದುಕಿನ ಸಾಧನೆ ಮೇಲೆ ಬೆಳಕು ಚೆಲ್ಲಿದ ಮೇಜಿನ ಮಾತು

0
335

ಸನ್ಮಾರ್ಗ ವಾರ್ತೆ

ಬೀದರ್: ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಸೀರತ್ ಅಭಿಯಾನ ಅಂಗವಾಗಿ ಇಲ್ಲಿಯ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಈಚೆಗೆ ಆಯೋಜಿಸಿದ್ದ `ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)’ ಕುರಿತ ಮೇಜಿನ ಮಾತು ಪ್ರವಾದಿ ಮುಹಮ್ಮದ್(ಸ) ಅವರ ಬದುಕಿನ ಸಾಧನೆ ಮೇಲೆ ಬೆಳಕು ಚೆಲ್ಲಿತು.

ಪ್ರವಾದಿ ಮುಹಮ್ಮದ್(ಸ) ಅವರು ವಿವಿಧ ಕ್ಷೇತ್ರಗಳಲ್ಲಿ ಅಲ್ಪಾವಧಿಯಲ್ಲೇ ಹೇಗೆ ಅಗಾಧ ಪರಿವರ್ತನೆ ತಂದರು ಎನ್ನುವುದನ್ನು ಅನೇಕ ಬುದ್ಧಿ ಜೀವಿಗಳು ವಿವರಿಸಿದರು.

ಅವರ ಕಾಲದಲ್ಲಿ ಆಧ್ಯಾತ್ಮಿಕ, ಸಾಮಾಜಿಕ, ರಾಜಕೀಯ, ನೈತಿಕ ನ್ಯಾಯ ವ್ಯವಸ್ಥೆ ಮೊದಲಾದ ರಂಗಗಳಲ್ಲಿ ಆದ ಬದಲಾವಣೆಗಳನ್ನು ಬಿಡಿಸಿಟ್ಟರು.

ಪ್ರವಾದಿ ಮುಹಮ್ಮದ್(ಸ)ರ ಆತ್ಮಶುದ್ಧಿ, ಶಿಕ್ಷಣ, ಮಾನವ ಮೌಲ್ಯಗಳ ಕುರಿತಾಗಿಯೂ ಚರ್ಚೆ ನಡೆಸಿದರು.

ಡಾ. ವಿಜಯ್ ಬಲ್ಲೂರಕರ್, ಡಾ. ವಿಜಯಶ್ರೀ ಬಶೆಟ್ಟಿ, ಡಾ. ಬುಶ್ರಾ ಐಮನ್, ಪಾರ್ವತಿ ಸೋನಾರೆ, ಮೌಲಾನಾ ಅಯ್ಯೂಬ್ ಸಲೀಂ, ವೀರಭದ್ರಪ್ಪ ಉಪ್ಪಿನ್, ಬಿ.ಎಸ್. ಕುದರೆ, ಜಗದೀಶ್ ಬಿರಾದಾರ, ಪ್ರೊ. ಮನೋಜಕುಮಾರ, ಬಂಡಯ್ಯ ಸ್ವಾಮಿ, ರೂಪಾ ಬಹೆನ್‌ಜಿ, ಉಪನ್ಯಾಸಕಿ ರೂಪಾರಾಣಿ, ಶಿಕ್ಷಕಿ ಲತಿಕಾ, ಮಹೇಶ್ ಗೋರನಾಳಕರ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಜಮಾ ಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಮಂಡಳಿ ಸದಸ್ಯ ಮುಹಮ್ಮದ್ ಆಸಿಫುದ್ದೀನ್ ಕೊನೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಜಮಾಅತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕದ ಅಧ್ಯಕ್ಷ ಮುಹಮ್ಮದ್ ಮೌಅಝ್ಝಮ್, ಡಾ. ಮಕ್ಸೂದ್ ಚಂದಾ, ಡಾ. ಚಂದ್ರಕಾಂತ ಗುದಗೆ, ಡಾ. ಸಿ. ಆನಂದರಾವ್, ಶಂಕರ ದೊಡ್ಡಿ, ಆಸ್ಮಾ ಸುಲ್ತಾನಾ, ತೌಹೀದ್ ಸಿಂಧೆ, ರಾಜಕುಮಾರ ಹೆಬ್ಬಾಳೆ, ವಿಜಯಕುಮಾರ ಸೋನಾರೆ, ಮಚ್ಚೇಂದ್ರ ವಾಘಮಾರೆ, ಮುಹಮ್ಮದ್ ಆರಿಫುದ್ದೀನ್, ಡಾ. ಸೈಯದ್ ಹುಸಾಮುದ್ದೀನ್ ಉಝೇರ್, ಸಿದ್ದು ಫುಲಾರೆ, ಮುಹಮ್ಮದ್ ಸಲಾವುದ್ದೀನ್, ಡಾ. ನವೀದ್ ಇರ್ಷಾದ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಆರಂಭದಲ್ಲಿ ಸೈಯದ್ ಅತೀಕುಲ್ಲಾಹ ಕುರ್‌ಆನ್ ಪಠಣ ಮಾಡಿದರು. ಜಮಾಅತೆ ಇಸ್ಲಾಮಿಮೀ ಹಿಂದ್ ಮಾಧ್ಯಮ ಉಪ ಸಂಚಾಲಕ ಮುಹಮ್ಮದ್ ನಿಝಾಮುದ್ದೀನ್ ವಿಷಯ ಮಂಡಿಸಿದರು. ರಫೀಕ್ ಅಹಮ್ಮದ್ ನಿರೂಪಿಸಿದರು.