ಸನ್ಮಾರ್ಗ ವಾರ್ತೆ
ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಉಮ್ರ ಯಾತ್ರಿಕರನ್ನು ಮರಳಿ ಕರೆ ತರುವ ಪ್ರಯತ್ನಗಳನ್ನು ಭಾರತೀಯ ರಾಯಭಾರ ಕಚೇರಿ ಮತ್ತು ಜಿದ್ದಾ ಕಾನ್ಸಲೆಟ್ ತೀವ್ರಗೊಳಿಸಿದೆ. ಕಳೆದ ವಾರದಲ್ಲಿ ಸುಮಾರು 3000 ಯಾತ್ರಿಕರು ಲಭ್ಯವಿರುವ ವಿಮಾನಗಳಲ್ಲಿ ಭಾರತಕ್ಕೆ ಮರಳಿದ್ದಾರೆ. ಉಳಿದ ಯಾತ್ರಿಕರ ಮರಳುವಿಕೆಯನ್ನು ತ್ವರಿತಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ.
ಈ ಹಿಂದೆ ಬುಕ್ ಮಾಡಿದ್ದ ಹತ್ತು ಸಾವಿರಕ್ಕೂ ಹೆಚ್ಚು ಉಮ್ರಾಯ ಯಾತ್ರಿಕರು ಸುರಕ್ಷಿತವಾಗಿ ಮರಳಿದ್ದಾರೆ. ಹೌತಿ ದಾಳಿಯ ನಂತರ ಭಾರತೀಯ ವಿಮಾನಯಾನ ಸಂಸ್ಥೆಗಳು ಸೌದಿ ಅರೇಬಿಯಾಕ್ಕೆ ತಮ್ಮ ಸೇವೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿರುವ ಕಾರಣ ಬಿಕ್ಕಟ್ಟು ಪ್ರಾರಂಭವಾಯಿತು. ಸಿಕ್ಕಿಬಿದ್ದ ಉಮ್ರಾ ಯಾತ್ರಿಕರನ್ನು ಮರಳಿ ಕರೆತರಲು ಭಾರತೀಯ ರಾಯಭಾರ ಕಚೇರಿ ಮತ್ತು ಜಿದ್ದ ಕನ್ಸುಲೆಟ್ ಪ್ರಸ್ತುತ ಮಧ್ಯಪ್ರವೇಶಿಸುತ್ತಿವೆ. ಇದರ ಭಾಗವಾಗಿ ವಿಮಾನ ಯಾದನ ಸಂಸ್ಥೆಗಳು ಮತ್ತು ಉಮ್ರ ನಿರ್ವಾಹಕರೊಂದಿಗೆ ಚರ್ಚೆಗಳು ಪ್ರಗತಿಯಲ್ಲಿವೆ. ಭಾರತೀಯ ನಾಗರಿಕರಿಗೆ ಸಹಾಯ ಮಾಡಲು ರಾಯಭಾರ ಕಚೇರಿ ಮತ್ತು ಕಾನ್ಸುಲೆಟ್ 24 ಗಂಟೆಗಳ ನಿಯಂತ್ರಣ ಕೊಠಡಿಗಳನ್ನು ಪ್ರಾರಂಭಿಸಿವೆ ವಿವಿಧ ಗುಂಪುಗಳಲ್ಲಿ ಆಗಮಿಸಿದ್ದ ಹೆಚ್ಚಿನ ಯಾತ್ರಿಕರು ಮನೆಗೆ ಮರಳಿದ್ದು ಉಳಿದವರಿಗೆ ಆಶ್ವಾಸನೆ ನೀಡಲಾಗಿದೆ.












