ಸನ್ಮಾರ್ಗ ವಾರ್ತೆ
ಸೆಪ್ಟೆಂಬರ್ ನಲ್ಲಿ ಫ್ಲೈ ದುಬೈ ವಿಮಾನದ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಪ್ರಯಾಣಿಕರನ್ನು ರಕ್ಷಿಸುವುದಕ್ಕಾಗಿ ಹೋರಾಡಿದ ಭಾರತೀಯ ಪೈಲೆಟ್ ಸ್ಮಿತ್ ಮಚ್ಚಾರ್ ಗೆ ಯುಎಇ ಅಧ್ಯಕ್ಷ ಶೇಕ್ ಮೊಹಮ್ಮದ್ ಬಿನ್ ಜಾಯಿದ್ ಅಲ್ ನಹಿಯಾನ್ ಸನ್ಮಾನಿಸಿದ್ದಾರೆ.
ಇದೇ ರೀತಿ ಫ್ಲೈ ದುಬೈ ಉದ್ಯೋಗಿಗಳನ್ನು ಕೂಡ ಅವರು ಸನ್ಮಾನಿಸಿದ್ದಾರೆ.
ಸೆಪ್ಟೆಂಬರ್ 30ರಂದು ದುಬೈ ನಿಂದ ಟೆಲ್ ಅವಿವ್ ಗೆ ಹಾರುತ್ತಿದ್ದ ವಿಮಾನದಲ್ಲಿ ಆಘಾತಕಾರಿ ಘಟನೆ ನಡೆದಿತ್ತು. ವಿಮಾನದ ಪೈಲೆಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಸಹ ಪೈಲೆಟ್ ಹಲ್ಲೆ ನಡೆಸಿ ತಲೆ ಮತ್ತು ಕೈಗೆ ಗಾಯ ಮಾಡಿದ್ದರು. ಆಬಳಿಕ ವಿಮಾನದಲ್ಲಿದ್ದ ಸಹ ಪೈಲೆಟ್ ಗಳು ವಿಮಾನವನ್ನು ನಿಯಂತ್ರಣಕ್ಕೆ ಪಡೆದುಕೊಂಡು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಲ್ಯಾಂಡ್ ಮಾಡಿದ್ದರು. ಮಚ್ಚಾರ್ ಯುಎಇಎಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












