ಮಸ್ಜಿದುಲ್ ಹರಾಮ್: ಯಾತ್ರಿಕರ ಪಾದ ರಕ್ಷಣೆಗೆ ಹೊಸ ವ್ಯವಸ್ಥೆ

0
264

ಸನ್ಮಾರ್ಗ ವಾರ್ತೆ

ಮಸ್ಜಿದುಲ್ ಹರಾಮ್ ಗೆ ಭೇಟಿ ನೀಡುವ ಯಾತ್ರಿಕರ ಪಾದಗಳನ್ನು ರಕ್ಷಿಸಲು ಹೊಸ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.

ಮಸ್ಜಿದುಲ್ ಹರಾಮ್ ನಲ್ಲಿ ಹೊಸದಾಗಿ ಸ್ವಯಂ ಚಾಲಿತ ಪ್ಲಾಸ್ಟಿಕ್ ಕವರ್ ಡಿಸ್ಪೆನ್ಸರ್ ಗಳನ್ನು ಸ್ಥಾಪಿಸಲಾಗಿದೆ. ಇದು ಪಾದಗಳ ಮೇಲೆ ಕೊಳಕು ಸಂಗ್ರಹವಾಗುವುದನ್ನು ತಡೆಯಲು ಮತ್ತು ಮಸೀದಿ ಒಳಗೆ ಶುಚಿತ್ವವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲಿದೆ.

ಯಾತ್ರಿಕರು ಯಂತ್ರದ ಒಳಗೆ ಕಾಲಿಟ್ಟಾಗ ನೀಲಿ ಪ್ಲಾಸ್ಟಿಕ್ ಕವರ್ ಕೆಲವೇ ಸೆಕೆಂಡುಗಳಲ್ಲಿ ಪಾದಗಳನ್ನು ಸ್ವಯಂ ಚಾಲಿತವಾಗಿ ಆವರಿಸುತ್ತದೆ. ಧೂಳಿನ ಕಣಗಳಿಂದ ಉಂಟಾಗುವ ಅಲರ್ಜಿಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಯಾತ್ರಿಕರನ್ನು ರಕ್ಷಿಸುವಲ್ಲಿ ಇದು ಸಹಾಯ ಮಾಡುತ್ತದೆ.

ಕಾಬಾ ತವಾಫ್ ನಿಂದ ಸಫಾ ಮರ್ವಕ್ಕೆ ಹೋಗುವ ದಾರಿಯಲ್ಲಿ ಪರೀಕ್ಷಾರ್ಥ ಸ್ಮಾರ್ಟ್ ಡಿಸ್ಪೆನ್ಸರ್ ಗಳನ್ನು ಸ್ಥಾಪಿಸಲಾಗಿದೆ. ಯಾತ್ರಿಕರ ಪ್ರತಿಕ್ರಿಯೆಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಹರಮ್ ನ ಹೆಚ್ಚಿನ ಭಾಗಗಳಿಗೆ ಈ ವ್ಯವಸ್ಥೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.