ಶ್ರೀನಗರ, ಆ. 9: ಐದು ದಿನಗಳಿಂದ ಇಲ್ಲದ ಇಂಟೆರ್ ನೆಟ್, ಫೋನ್ ಸೇವೆಗಳನ್ನು ಅಂಶಿಕವಾಗಿ ಆರಂಭಿಸಲಾಗಿದೆ. ಈದ್ ಇರುವುದರಿಂದ ಶುಕ್ರವಾರ ಬೆಳಗ್ಗಿನಿಂದ ಈ ರೀತಿ ಸರಕಾರ ಮಾಡಿದೆ. ಕಾಶ್ಮೀರದ ವಿಶೇಷ ಸ್ಥಾನಮಾನದ ವಿಧಿ 370 ಮತ್ತು 3೫ ಎ ತೆಗೆದು ಹಾಕಿದ ಬಳಿಕ ಇವೆಲ್ಲ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ರಾಜ್ಯಪಾಲ ಸತ್ಯಪಾಲ ಮಲ್ಲಿಕರು ನಿನ್ನೆ ಕಾಶ್ಮೀರದ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಪ್ರಾರ್ಥನೆ ಮತ್ತು ಈದ್ಗೆ ನಿಯಂತ್ರಣಗಳಲ್ಲಿ ವಿನಾಯತಿ ಘೋಷಿಸಿದ್ದರು. ಶ್ರೀನಗರದ ಪ್ರಧಾನ ಜುಮಾ ಮಸೀದಿ ಗೇಟ್ ಮುಚ್ಚಿದೆ. ಆದರೆ ವಿವಿಧ ಸಣ್ಣ ಮಸೀದಿಗಳಲ್ಲಿ ಪ್ರಾರ್ಥನೆಗೆ ಅನುಮತಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇತ್ತಾರೆ. ಜನರು ತಮ್ಮ ಸಮೀಪದ ಮಸೀದಿಗೆ ಹೋಗಿ ಜುಮ್ಮಾ ನಮಾಝ್ ಮಾಡಬಹುದು. ಇದಕ್ಕೆ ತಡೆಯಿಲ್ಲ ಎಂದು ಪೋಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದರು. ಈ ವರ್ಷ 53ನೆ ಬಾರಿ ಜಮ್ಮು ಕಾಶ್ಮೀರದಲ್ಲಿ ಇಂಟೆರ್ ನೆಟ್ ಕಡಿದು ಹಾಕಲಾಗಿದೆ. ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಉಮರ್ ಅಬ್ದುಲ್ಲ ಸಹಿತ 400ಕ್ಕೂ ಹೆಚ್ಚು ಸಮುದಾಯದ ನಾಯಕರು ಈಗಲೂ ಕಸ್ಟಡಿಯಲ್ಲಿದ್ದಾರೆ.












