ಗುರ್‍ಗಾಂವ್‍ನಲ್ಲಿ ಉಝ್ಬೆಕ್ ಮಹಿಳೆಯ ಸಾಮೂಹಿಕ ಅತ್ಯಾಚಾರ: ಆರೋಪಿಗಳು ಭೂಗತ

0
844

ಗುರ್‍ಗಾಂವ್, ಆ. 13: ಉಝ್ಬೇಕಿಸ್ತಾನದಿಂದ ದಿಲ್ಲಿಗೆ ಬಂದ ಯುವತಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರಗೈದ ಘಟನೆ ಮಸೂದ್‍ಪುರಿ ಎಂಬಲ್ಲಿ ನಡೆದಿದೆ. ಎರಡು ವರ್ಷಗಳಿಂದ ಫೇಸ್‍ಬುಕ್‍ನಲ್ಲಿ ಪರಿಚಿತನಾಗಿದ್ದ ಗುಜರಿ ವ್ಯಾಪಾರಿ ಸಹಿತ ಮೂವರು ಸೇರಿ ಯುವತಿಯನ್ನು ಅತ್ಯಾಚಾರ ಮಾಡಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ದಕ್ಷಿಣ ದಿಲ್ಲಿಯ ಫ್ಲಾಟ್‍ವೊಂದರ ಬಳಿ ಎಸೆದು ಹೋಗಿದ್ದಾರೆ. ನಂತರ ಯುವತಿಯ ಗೆಳೆಯರು ಏಮ್ಸ್ ಗೆ ದಾಖಲಿಸಿದ್ದಾರೆ.

ಶನಿವಾರ ರಾತ್ರೆ ದಕ್ಷಿಣ ದಿಲ್ಲಿಯ ವಾಸಸ್ಥಳದಿಂದ ಯುವತಿಯ ಪರಿಚಯದ ಯುವಕ ಕಾರಿನಲ್ಲಿ ಕರೆದು ಕೊಂಡು ಹೋಗಿದ್ದ. ಕಾರಿನಲ್ಲಿ ಈತನ ಇಬ್ಬರು ಗೆಳೆಯರೂ ಇದ್ದರು. ಕಾರಿನಲ್ಲಿಯಲ್ಲಿಯೇ ಕೆಟ್ಟದಾಗಿ ವರ್ತಿಸಿ ಯುವತಿಗೆ ಥಳಿಸಿ ಗುರುಗ್ರಾಮದ ಫ್ಲಾಟ್‍ಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ವಸಂತ್ ಕುಂಜ್ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ತಲೆತಪ್ಪಿಸಿಕೊಂಡಿದ್ದು ಕೇಸು ದಾಖಲಿಸಿಕೊಳ್ಳದಂತೆ ಮುಖ್ಯ ಆರೋಪಿಯ ಹೆತ್ತವರು ಒತ್ತಡ ಹಾಕುತ್ತಿದ್ದಾರೆ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.