ನಿಯಂತ್ರಣ ಸಡಿಲಿಕೆ: ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಇಂದಿನಿಂದ ಇಂಟರ್‌ನೆಟ್, ದೂರವಾಣಿ ಸಂಪರ್ಕ

0
457

ಜಮ್ಮು: ವಿಶೇಷ ಸ್ಥಾನಮಾನ ರದ್ದುಪಡಿಸಲಾದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ನಿಷೇಧಿಸಲಾಗಿದ್ದ 2ಜಿ ಇಂಟರ್‌ನೆಟ್, ದೂರವಾಣಿ ಸೇವೆಗಳ್ನು ಮರುಸ್ಥಾಪಿಸಲಾಗಿದೆ. ಜಮ್ಮು, ರಿಯಾಸಿ, ಸಾಂಬಾ,ಕತ್ವಾ, ಉದ್ದಂಪುರ ಜಿಲ್ಲೆಗಳಲ್ಲಿ ಮಾತ್ರ ನಿಯಂತ್ರಣಗಳಲ್ಲಿ ಸಡಿಲಿಕೆಯಾಗಲಿದೆ. ಕಳೆದ ಆಗಸ್ಟ್ ಐದರಿಂದ ಮೊಬೈಲ್-ಲ್ಯಾಂಡ್ ಲೈನ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ಶುಕ್ರವಾರದಿಂದ ನಿಯಂತ್ರಣಗಳನ್ನು ಹಂತಹಂತವಾಗಿ ಸಡಿಲಿಕೆಗೊಳಿಸಲು ಆರಂಭಿಸಲಾಗಿದ್ದು. ಎಲ್ಲ ಸರಕಾರಿ ಕಚೇರಿಗಳು ತೆರೆದಿಡಬೇಕೆಂದು ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಾಲಿಕ್ ಸೂಚನೆ ನೀಡಿದ್ದಾರೆ. ಮಾತ್ರವಲ್ಲ, ಸೋಮವಾದರದಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗಲಿದೆ. ಇದೇ ವೇಳೆ ಬಂಧಿಸಲಾಗಿರುವ ಗ್ರೇಟರ್ ಕಾಶ್ಮೀರ್ ಪತ್ರಿಕೆಯ ವರದಿಗಾರ ಇರ್ಫಾನ್ ಮಾಲಿಕ್‍ರನ್ನು ಬಾಂಡ್ ಬರೆದು ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.