ಹೊಸದಿಲ್ಲಿ,ಆ.17: ದಿಲ್ಲಿಯ ಆಲ್ ಇಂಡಿಯ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ವಿತ್ತಸಚಿವ ಅರುಣ್ ಜೇಟ್ಲಿಯವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಆರೋಗ್ಯ ಸಚಿವ ಹರ್ಷ್ ವರ್ಧನ್ ಮಧ್ಯರಾತ್ರೆಯೇ ಆಸ್ಪತ್ರೆಗೆ ಭೇಟಿ ನೀಡಿದರು.
ಉಸಿರಾಟದ ತೊಂದರೆಯಿಂದಾಗಿ ಏಮ್ಸ್ನ ತೀವ್ರನಿಗಾ ಘಟಕದಲ್ಲಿ ಜೇಟ್ಲಿಯವರನ್ನು ಈ ತಿಂಗಳ 9 ರಂದು ದಾಖಲಿಸಲಾಗಿತ್ತು. ಶುಕ್ರವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ, ಕಳೆದ ವಾರ ಉಪರಾಷ್ಟ್ರಪತಿ ವೆಂಕಯ್ಯ ನಾಯಿಡು ಮುಂತಾದವರು ಜೇಟ್ಲಿಯವರನ್ನು ಭೇಟಿಯಾಗಿದ್ದರು.ಜೇಟ್ಲಿಯವರಿಗೆ ಅರವತ್ತಾರು ವರ್ಷ ವಯಸ್ಸಾಗಿದ್ದು ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಕಳೆದ ಜನೆವರಿಯಲ್ಲಿ ಜೇಟ್ಲಿಯವರು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಾಗಿದ್ದರು.












