ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದುಪಡಿಸಲಾಗುವುದು- ಕೇಂದ್ರ ಸಚಿವ ಕಿಶನ್ ರೆಡ್ಡಿ

0
214

ಸನ್ಮಾರ್ಗ ವಾರ್ತೆ

ಹೈದರಾಬಾದ್: ತೆಲಂಗಾಣದಲ್ಲಿ ನಾವು ಸರಕಾರ ರಚಿಸಿದರೆ ಮುಸ್ಲಿಮರ ಮೀಸಲಾತಿಯನ್ನು ತೆಗೆದು ಹಾಕುತ್ತೇವೆ ಎಂದು ಬಿಜೆಪಿಯ ಕೇಂದ್ರ ಸಚಿವ ಬಿಜೆಪಿಯ ರಾಜ್ಯ ಅಧ್ಯಕ್ಷ ಜಿ. ಕಿಶನ್ ರೆಡ್ಡಿ ಹೇಳಿದರು. ನವೆಂಬರ್ 3ರಿಂದ ಬಿಜೆಪಿಯ ಪ್ರಚಾರ ತೀವ್ರಗೊಳ್ಳಲಿದೆ ಎಂದು ಕೇಂದ್ರ ಸಚಿವರು ಮತ್ತು ನಾಯಕರು ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವಿಭಾಗದ ಒಬ್ಬರು ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಘೋಷಿಸಿದ್ದರು. ಹಿಂದುಳಿದ ವ್ಯಕ್ತಿಯನ್ನು ಮುಖ್ಯ ಮಂತ್ರಿ ಮಾಡಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದರೆ ಸರಕಾರಗಳೆಲ್ಲವೂ ಜನರನ್ನು ವಂಚಿಸಿದೆ. ಈಗ ಇದೊ ಅವರ ಕನಸು ನಿಜವಾಗುವ ಸಂದರ್ಭ ಬಂದಿದೆ. ಸ್ವಾತಂತ್ರ್ಯ ಸಿಕ್ಕಿದ ಬಳಿಕ ಮೊತ್ತಮೊದಲ ಬಾರಿ ಹಿಂದುಳಿದ ವಿಭಾಗದ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯಿಂದ ಮುಖ್ಯಮಂತ್ರಿಯಾದರು ಎಂದು ಅವರು ಹೇಳಿದರು.

ಹಿಂದುಳಿದ ವಿಭಾಗದ ಮುಖ್ಯ ಮಂತ್ರಿ ಮಾಡುವುದು ಎಂಬ ಬಿಜೆಪಿ ಘೋಷಣೆಗೆ ಸಾರ್ವಜನಿಕರಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಲವು ಹಿಂದುಳಿದ ಸಂಘಟನೆಗಳು ಬಿಜೆಪಿಯನ್ನು ಬೆಂಬಲಿಸಿ ಪ್ರಸ್ತಾವ ಪಾಸು ಮಾಡಿದೆ. ಮೊದಲ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಯನ್ನು ಮಂತ್ರಿ ಮಾಡುವುದರಲ್ಲಿ ಬಿಆರ್‍ಎಸ್ ಸೋಲುಂಡಿತು. ಹಿಂದುಳಿದ ವಿಭಾಗದವರ ಮೀಸಲಾತಿ ಪಾಲನ್ನು ಕೊಡುವುದರಲ್ಲಿ ಕಾಂಗ್ರೆಸ್ ವಿಫಲವಾಯಿತು ಎಂದು ಕಿಸನ್ ರೆಡ್ಡಿ ಆರೋಪಿಸಿದರು.

ಅಲ್ಪಸಂಖ್ಯಾತ ವಿಭಾಗದ ಎಪಿಜೆ ಅಬ್ದುಲ್ ಕಲಾಮ್‍ರನ್ನು ಭಾರತದಲ್ಲಿ ರಾಷ್ಟ್ರಪತಿ ಮಾಡಿದ ಇತಿಹಾಸ ಬಿಜೆಪಿಗಿದೆ. ದಲಿತ ರಾಮನಾಥ ಕೊವಿಂದರನ್ನು ರಾಷ್ಟ್ರಪತಿ ಮಾಡಿದ್ದು, ಈಗ ಬುಡಕಟ್ಟು ವಿಭಾಗದ ದ್ರೌಪದಿ ಮುರ್ಮುರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿಯಾಗಿದೆ. ಧರ್ಮದ ಆಧಾರದಲ್ಲಿ ಶೇ. 4 ಮೀಸಲಾತಿ ತೆಗೆದು ಹಾಕಲು ಬಿಜೆಪಿ ತೀರ್ಮಾನಿಸಿದೆ. ತೆಲಂಗಾಣದಲ್ಲಿ ಎಸ್‍ಸಿ, ಎಸ್‍ಟಿ, ಒಬಿಸಿ ಆಧಾರದಲ್ಲಿ ಮೀಸಲಾತಿ ಜಾರಿಗೊಳಿಸಲಾಗುವುದು ಎಂದು ಕಿಶನ್ ರೆಡ್ಡಿ ವಿವರಿಸಿದರು.