ಅಬ್ದುಲ್ಲ ಕುಟ್ಟಿ ಪ್ರಚಾರಕ್ಕೆ ನಾಗರಿಕರ ವಿರೋಧ: ಬರಿಗೈಯಲ್ಲಿ ಮರಳಿದ ಕುಟ್ಟಿ

0
1466

ಸನ್ಮಾರ್ಗ ವಾರ್ತೆ-

ತಿರುವನಂತಪುರಂ, ಜ.13: ಪೌರತ್ವ ತಿದ್ದುಪಡಿ ಸಮರ್ಥಿಸಿ ಬಿಜೆಪಿ ಕೇರಳ ರಾಜ್ಯ ಉಪಾಧ್ಯಕ್ಷ ಎ ಪಿ ಅಬ್ದುಲ್ಲ ಕುಟ್ಟಿ ನಡೆಸಿದ ಪ್ರಚಾರವನ್ನು ಊರವರು ಪ್ರತಿಭಟಿಸಿದರು. ಮಣಕಾಡ್ ಕುತ್ತುಕಲ್ಲ್ ಎಂಬಲ್ಲಿ ಪ್ರಚಾರಕ್ಕೆ ಬಂದಾಗ ಅಬ್ದುಲ್ಲ ಕುಟ್ಟಿಯವರನ್ನು ಊರವರು ವಿರೋಧಿಸಿದರು. ಜನರ ಪ್ರಶ್ನೆಯ ಮುಂದೆ ಅಬ್ದುಲ್ಲ ಕುಟ್ಟಿ ನಿರುತ್ತರನಾದರು. ದೇಶದಲ್ಲಿ ಪ್ರತಿಭಟನೆ, ಹೋರಾಟ ನಡೆಯುವುದು ಗೊತ್ತಿಲ್ಲವೇ ಎಂದು ಜರನು ಕೇಳಿದರು. ಪೌರತ್ವ ಕಾನೂನನ್ನು ತಿದ್ದುಪಡಿ ಯಾರು ವಿರೋಧಿಸಿದ್ದಾರೆ ಎಂದು ಅಬ್ದುಲ್ಲ ಕುಟ್ಟಿ ಕೇಳಿದರು.

1947ರ ವಿಭಜನೆಯ ಕಾಲದಲ್ಲಿ ಜಿನ್ನ ಪಾಕಿಸ್ತಾನಕ್ಕೆ ಕರೆದಾಗ ಹೋದವರು ತನ್ನ ಅಜ್ಜಂದಿರೆಂದು ಅವರು ಹೇಳಿದರು. ಪೌರತ್ವ ತಿದ್ದುಪಡಿಗೆ ಇಷ್ಟು ತೀವ್ರ ವಿರೋಧ ಇರುವುದರಿಂದ ಅದರ ಪರ ಪ್ರಚಾರ ಮಾಡಲು ನಾವು ಬಿಡುವುದಿಲ್ಲ ಎಂದು ಜನರು ಒಕ್ಕೊರಲಿನಿಂದ ಹೇಳಿದರು. ಅಬ್ದುಲ್ಲ ಕುಟ್ಟಿಯವರೊಡನೆ ಬಿಜೆಪಿ ಕಾರ್ಯಕರ್ತರು ಇದ್ದರು. ಪ್ರತಿಭಟನೆಯಿಂದಾಗಿ ಅಬ್ದುಲ್ಲಕುಟ್ಟಿ ವಾಪಸು ತೆರಳಿದರು.