ಪೌರತ್ವ ಕಾನೂನು ತರಲು ಬಿಡಲ್ಲ; ತಂದೆ, ಅಜ್ಜನ ಜನನ ತಾರೀಕು, ಸ್ಥಳವನ್ನು ತಡಕಾಡಲು ಯಾರೂ ಹೊರಡಬೇಡಿ- ಪಿಣರಾಯಿ ವಿಜಯನ್

0
1226

ಸನ್ಮಾರ್ಗ ವಾರ್ತೆ-

ಕಲ್ಲಿಕೋಟೆ, ಜ.13: ಪೌರತ್ವ ತಿದ್ದುಪಡಿ ಕಾನೂನು ಕುರಿತು ಕೇರಳದಲ್ಲಿ ಭಯ ಪಡುವ ಅಗತ್ಯವಿಲ್ಲ. ಕೇರಳ ಸುರಕ್ಷಿತ ಕೋಟೆಯಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಯಾವ ರೀತಿಯ ಬೆದರಿಕೆಯೂ ಕೇರಳದಲ್ಲಿ ನಡೆಯದು ಎಂದು ಸಂವಿಧಾನ ರಾಲಿಯನ್ನು ಉದ್ಘಾಟಿಸಿ ಮಾತಾಡುತ್ತಾ ಜನರಿಗೆ ಅವರು ಭರವಸೆ ನೀಡಿದರು.

ಪೌರತ್ವ ಕಾನೂನು ವಿರುದ್ಧ ಒಟ್ಟಾಗಿ ನಾವು ಮುಂದೆ ಸಾಗುವೆವು. ಆದರೆ, ಕೋಮುವಾದಿಗಳಿಗೂ ಭಯೋತ್ಪಾದಕರಿಗೂ ಇದರಲ್ಲಿ ಸ್ಥಾನವಿಲ್ಲ. ಇವರು ಬಂದರೆ ದಾರಿ ತಪ್ಪಿಸಿಬಿಡಬಹುದು. ಇಲ್ಲಿ ಹುಟ್ಟಿದವರು ಈ ನಾಡಿನ ಪ್ರಜೆಗಳು. ತಂದೆ, ಅಜ್ಜನ ಜನನ ತಾರೀಕು, ಸ್ಥಳವನ್ನು ತಡಕಾಡಲು ಯಾರೂ ಹೊರಡುವುದು ಬೇಡ. ನಮಗೆ ಯಾರದೆ ಸರ್ಟಿಫಿಕೆಟಿನ ಅಗತ್ಯವಿಲ್ಲ. ಎಲ್ಲರ ಜೊತೆ ರಾಜ್ಯ ಸರಕಾರ ಇದೆ. ಅನಿವಾಸಿಗಳೂ ಹೆದರಬೇಕಾಗಿಲ್ಲ. ಪೌರತ್ವ ತಿದ್ದುಪಡಿ ಕಾನೂನು ರದ್ದುಮಾಡಬೇಕಾಗುತ್ತದೆ, ರಾಷ್ಟ್ರೀಯ ಪೌರತ್ವ ಪಟ್ಟಿ ಜಾರಿಗೆ ಬರುವುದಿಲ್ಲ. ಜನಗಣತಿ ಮಾತ್ರ ತೆಗೆಯಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಇದಕ್ಕಿಂತ ಹೆಚ್ಚು ಯಾವುದೂ ನಡೆಯುವುದಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಆರೆಸ್ಸೆಸ್‍ಗೆ ಭಾರತದ ಸಂವಿಧಾನ ಸದಾ ಸಹ್ಯವಾಗಿಲ್ಲ ಎಂದು ಪಿಣರಾಯಿ ವಿಜಯನ್ ಹೆಳಿದರು.

ಸಂವಿಧಾನ ಸಂರಕ್ಷಣಾ ಸಮಿತಿ ನಡೆಸಿದ ರಾಲಿಯಲ್ಲಿ ಕೇರಳ ಸಮಸ್ತ ರಾಜ್ಯ ಅಧ್ಯಕ್ಷ ಪ್ರೊ.ಕೆ. ಆಲಿಕುಟ್ಟಿ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದ\ರು. ಸಚಿವರಾದ ಕೆ ಟಿ ಜಲೀಲ್, ಎ ಕೆ ಶಶೀಂದ್ರನ್ ಎಳಮರಂ ಕರೀಂ, ಪಣ್ಯನ್ ರವೀಂದ್ರನ್ ಕೇರಳ ಹಜ್ ಕಮಿಟಿ ಚೇರ್‍ಮೆನ್ ಸಿ. ಮುಹಮ್ಮದ್ ಫೈಝಿ, ಕೆಎನ್‍ಎಂ ರಾಜ್ಯ ಅಧ್ಯಕ್ಷ ಟಿಪಿ ಅಬ್ದುಲ್ಲಕೋಯ ಮದನಿ, ಪ್ರಧಾನ ಕಾರ್ಯದರ್ಶಿ ಸಿಪಿ ಉಮರ್ ಸುಲ್ಲಮಿ ಐಎನ್‍ಎಲ್ ರಾಜ್ಯ ಅಧ್ಯಕ್ಷ ಎ ಪಿ ಅಬ್ದುಲ್ ವಹಾಬ್ ಮುಂತಾದವರು ಭಾಗವಹಿಸಿದರು.