ರೈತರ ಹೋರಾಟವನ್ನು ಬೆಂಬಲಿಸಿದ ಬ್ರಿಟಿಷ್ ನಟಿ ಜಮೀಲಾ ಜಮೀಲ್‍ಗೆ ಅತ್ಯಾಚಾರ ಬೆದರಿಕೆ

0
1374

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಭಾರತದ ರೈತರ ಹೋರಾಟವನ್ನು ಬೆಂಬಲಿಸಿದ ಬ್ರಿಟಿಶ್ ನಟಿ ಜಮೀಲಾ ಜಮೀಲ್‍ರಿಗೆ ಅತ್ಯಾಚಾರ ಬೆದರಿಕೆಯೊಡ್ಡಲಾಗಿದೆ. ಖಾಸಗಿ ಸಂದೇಶವೊಂದರಲ್ಲಿ ಅವರಿಗೆ ಅತ್ಯಾಚಾರ ಬೆದರಿಕೆ ಹಾಕಲಾಗಿದೆ ಎಂದು ಅವರು ಇನ್‌ಸ್ಟಾ ಗ್ರಾಂನಲ್ಲಿ ತಿಳಿಸಿದ್ದಾರೆ.

ಕೆಲವು ತಿಂಗಳಿನಿಂದ ಭಾರತದಲ್ಲಿ ರೈತರ ಕುರಿತು ಮಾತಾಡುತ್ತಿದ್ದೇನೆ. ನನಗೆ ಕೊಲೆ, ಅತ್ಯಾಚಾರ ಬೆದರಿಕೆ ಬರುತ್ತಲೇ ಇದೆ. ನಾನೂ ಒಬ್ಬ ಮನುಷ್ಯಳು ಎಂಬುದನ್ನು ಟಳಳಸಂದೇಶ ಕಳುಹಿಸುವವರು ನೆನಪಿಡಬೇಕು. ಹಕ್ಕುಗಳಿಗಾಗಿ ಹೋರಾಡುತ್ತಿರುವವರಿಗೆ ನನ್ನ ಬೆಂಬಲ ಇದೆ. ರೈತ ಹೋರಾಟ ಕುರಿತು ಮಾತಾಡಲು ಪುರುಷರನ್ನೂ ನಿರ್ಬಂಧಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಯಾಕೆಂದರೆ ಅವರು ಈ ರೀತಿಯಲ್ಲಿ ಆಕ್ರಮಣಕ್ಕೊಳಗಾಗಲಾರರು ಎಂದು ಜಮೀಲಾ ಜಮೀಲ್ ಹೇಳಿದ್ದಾರೆ.

ಭಾರತ ಮೂಲದ ಅಲಿ ಜಮೀಲ್ ಮತ್ತು ಪಾಕಿಸ್ತಾನದ ಶಿರಿನ್ ಜಮೀಲ್‍ನ ಪುತ್ರಿಯಾಗಿರುವ ಜಮೀಲಾ ಟಿ4 ಕಾರ್ಯಕ್ರಮದಲ್ಲಿ ಟಿವಿ ಜಗತ್ತಿಗೆ ಬಂದಿದ್ದರು. ಅವರು ಹಲವು ಪಾಪ್ ಸರಣಿಯ ಆ್ಯಂಕರ್ ಆಗಿದ್ದರು. ಈ ಹಿಂದೆ ರೈತ ಹೋರಾಟವನ್ನು ಬೆಂಬಲಿಸಿದ ರಿಹಾನ್ನ, ಗ್ರೇಟ್ ಥನ್‌ಬರ್ಗ್, ಅಮೆರಿಕ ಅಧ್ಯಕ್ಷ ಕಮಲ ಹ್ಯಾರಿಸ್‍ರ ಸಂಬಂಧಿ ಮೀನಾ ಹ್ಯಾರಿಸ್ ರಂಗಪ್ರವೇಶಿಸಿದ್ದರು. ಇವರ ಫೋಟೊವನ್ನು ಸರಕಾರದ ಬೆಂಲಿಗರು ಸುಟ್ಟುಹಾಕಿದ್ದರು.