ತಮಿಳುನಾಡು: ಆನ್‍ಲೈನ್ ಜೂಜಾಟಕ್ಕೆ 2 ವರ್ಷ ಜೈಲು, 10,000 ರೂ. ದಂಡ

0
355

ಸನ್ಮಾರ್ಗ ವಾರ್ತೆ

ಚೆನ್ನೈ: ಹಲವು ಮಂದಿ ಆನ್‌ಲೈನ್ ಜೂಜಿನಿಂದಾಗಿ ಆತ್ಮಹತ್ಯೆ ಮಾಡಿಕೊಂಡು ಕುಟುಂಬವನ್ನು ನಡುದಾರಿಯಲ್ಲಿ ತೊರೆದು ಹೋಗಿದ್ದಾರೆ. ಯುವಕರನ್ನೂ, ಹದಿಹರೆಯದವರನ್ನು ಆಕರ್ಷಿಸುವ ಆನ್‍ಲೈನ್ ಜೂಟಾಟಕ್ಕೆ ತಮಿಳ್ನಾಡು ಸರಕಾರ ಕಠಿಣ ಶಿಕ್ಷೆ ವಿಧಿಸಲು ಮುಂದಾಗಿದೆ.

ರಮ್ಮಿ, ಪೋಕರ್ ಮೊದಲಾದ ಹಲವು ಹೆಸರಿನಲ್ಲಿ ವ್ಯಾಪಕವಾಗಿ ಹಣವಿಟ್ಟು ಆಡುವ ಆನ್‍ಲೈನ್ ಗೇಮ್‍ಗಳನ್ನು ಆಡಿದರೆ ಎರಡು ವರ್ಷ ಜೈಲು ಪ್ರತಿಯೊಬ್ಬರಿಗೂ ಹತ್ತು ಸಾವಿರ ದಂಡ ವಸೂಲು ಮಾಡುವ ತೀರ್ಮಾನವನ್ನು ತಮಿಳ್ನಾಡು ಸರಕಾರ ನಡೆಸಿದೆ. ಗುರುವಾರ ನಡೆದ ತಮಿಳ್ನಾಡು ಸಚಿವ ಸಂಪುಟ ಕಾನೂನಿಗೆ ಅಂಗೀಕಾರ ನೀಡಿದೆ.

ಕಂಪ್ಯೂಟರ್‍ಗಳೂ, ಮೊಬೈಲ್ ಫೋನ್‍ಗಳ ಮೂಲಕ ಮತ್ತು ಇತರ ಮಾಧ್ಯಮಗಳಾದ ಉಪಕರಣದ ಮೂಲಕ ರಾಜ್ಯದಲ್ಲಿ ಇಂತಹ ಆಟದಲ್ಲಿ ನಿರತರಾಗಬಾರದು ಎಂದು ಸರಕಾರ ಆಗ್ರಹಿಸಿದೆ. ಈ ಆಟಕ್ಕೆ ಅವಕಾಶ, ಸೌಲಭ್ಯ ಮಾಡಿಕೊಡುವುದು ಕೂಡ ಕ್ರಿಮಿನಲ್ ಅಪರಾಧವಾಗಿದೆ. ಲಾಟರಿ ಆನ್‍ಲೈನ್ ಜೂಜಾಟದ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆನ್‍ಲೈನ್ ಜೂಜು ಯುವಕರನ್ನು ಹದಿಹರೆಯದವರನ್ನು ಆಕರ್ಷಿಸುತ್ತಿದೆ. ಅವರು ಈ ಆಟಕ್ಕೆ ಆಡಿಕ್ಟ್ ಆಗುತ್ತಿದ್ದಾರೆ ಎಂದು ಸರಕಾರಿ ಪ್ರಕಟಣೆ ಮುನ್ನೆಚ್ಚರಿಕೆ ನೀಡಿದೆ. ನಿರಪರಾಧಿಗಳು ಇದರ ಹೆಸರಿನಲ್ಲಿ ಮೋಸಕ್ಕೊಳಗಾಗುತ್ತಿದೆ. ಹಣವನ್ನು ವ್ಯಾಪಕವಾಗಿ ಕಳೆದುಕೊಳ್ಳುವುದು ನಿರಂತರ ನಡೆಯುತ್ತಿದೆ ಎಂದು ಸರಕಾರ ತಿಳಿಸಿತು. ತಮಿಳ್ನಾಡಿನಲ್ಲಿ ಕಳೆದ ನವೆಂಬರಿನಲ್ಲಿ ಹೊರಡಿಸಲಾಗಿದ್ದ ಸುಗ್ರಿವಾಜ್ಞೆ ಕೆಲವು ಬದಲಾವಣೆಗಳೊಂದಿಗೆ ಕಾನೂನು ರೂಪಕ್ಕೆ ಬಂದಿದೆ.