ಅಹ್ಲನ್ ಯಾ ರಮದಾನ್ ನನ್ನೊಂದಿಗೆ

0
280

ಸನ್ಮಾರ್ಗ ವಾರ್ತೆ

ಕರುಣೆಯ ತಿಂಗಳು
ಕರುಣೆಯಾಗಿ ನಿನ್ನ ಮೇಲೆ
ಇಳಿಯುತಿರಲು
ನಿನ್ನಲ್ಲೇನಾಗಿದೆ ಬದಲಾವಣೆ

ಪ್ರಶ್ನಿಸಿಕೊಳ್ಳುತ್ತಿರುವೆ
ನನ್ನಲ್ಲೆ ನಾನು…

ಬದುಕಿನಲ್ಲಿ ಬಂದ ಹೊಸ ಹೊಸ ಎಲ್ಲಾ ರಮದಾನ್
ನಿನ್ನಲ್ಲೇನು ಹೊಸತು ತಂದಿದೆ
ಹುಡುಕುತಿರುವೆ ನನ್ನಲ್ಲಿ ನಾನು…

ಕೂಡಿಸಿದ್ದೇನು?
ಕಳೆದದ್ದೇನು…..?
ಯಾವುದರಿಂದ ಬಾಗಿಸಲ್ಪಟ್ಟಿವೆ
ಕೇಳುತಿದೆ ಮನಸು ನನ್ನೊಂದಿಗೆ…

ದಿಕ್ರ್ ದುಆಗಳಿಂದ ನಾಲಿಗೆಗೆ
ಕೆಲಸವಾಯಿತು ವಿನಃ
ಹೃದಯದಿಂದ ಹೃದಯಕ್ಕೆ
ಪಸರಿಸಿದೆಯೇ

ನೊಂದ ಹೃದಯಗಳಿಗೆ
ನನ್ನಿಂದೇನಾಗಿದೆ
ಹುಡುಕುತಿರುವೆ ನನ್ನಲ್ಲಿ ನಾನು….

ಅಹಂಕಾರ ಕಡಿಮೆಯಾಯಿತೆ
ಕೋಪ ತಾಪಗಳು ಕಡಿಮೆಯಾಯಿತೆ
ಒಳ್ಳೆಯತನ ಎಷ್ಟು ಉಳಿದಿದೆ
ಪರನಿಂದೆ ಯಿಂದ ಎಷ್ಟು ದೂರವಾದೆ.
ಕುಟುಂಬಿಕರಿಗೆ ಷ್ಟು ಹತ್ತಿರವಾದೆ
ಪ್ರಶ್ನಿಸಿಕೊಳ್ಳುತ್ತಿರುವೆ ನನ್ನಲ್ಲೆ ನಾನು

ಮತ್ತೆ ಕರುಣೆಯ ತಿಂಗಳು ಬದಲಾಗಿ ಬರುತಿರಲು
ಬದುಕು ಮಾತ್ರ ಬದಲಾಗಲೇ ಇಲ್ಲವೇ
ಪ್ರಶ್ನಿಸುತಿದೆ ಮನಸು…..

ಬದುಕಿನುದ್ದಕ್ಕೂ
ಅರುವತ್ತು ರಮದಾನ್
ನಿನ್ನಿಂದ ದಾಟಿದರೂ
ಬದಲಾಗದ ಬದುಕಿಗೇನು ಬೆಲೆ….

ಇನ್ನೊಂದು ಶುಕ್ರವಾರ
ಮಗದೊಂದು ತರಾವೀಹ್…
ಅಲ್ಲೊಂದು ಇಫ್ತಾರ್..
ಇಲ್ಲೊಂದು ಅಹ್ಲನ್ ರಮದಾನ್
ನಿನ್ನಲ್ಲೇನು ತಂದಿದೆ….

ಇನ್ನೊಂದು ಫಜ್ರ್…
ಮಗದೊಂದು ಝೊಹರ್…
ಮರಳಿ ಬರುವ ಅಸರ್
ಕಾಯಮ್ ಇರುವ ಮಗ್ರಿಬ್…
ಆಯಾಸದ ಇಶಾ
ನಿನಗೇನು ತಂದು ಕೊಟ್ಟಿತು
ಪ್ರಶ್ನಿಸುತಿದೆ ಮನಸು.

ಹೊಸ ನಿಮಿಷ ಹೊಸ ಉಸಿರು
ಸಾವಿನ ಸಿದ್ಧತೆ….
ಏನೋ ಇನ್ನೇನೋ…..

ಬದುಕಿನಲ್ಲಿ ಕಳೆದವರೆಲ್ಲೋ.

ಅರ್ಥ ವಿಲ್ಲದ ಬದುಕು
ನಿರರ್ಥಕ ಬದುಕು.

ಬರೆದಿರಲು ಸೃಷ್ಟಿ ಕರ್ತ
ಬದುಕಿಗೆ ಅರ್ಥ…
ಮಾಡದಿರು ಸಮಯವನು ವ್ಯರ್ಥ….

ಹೊಸ ಉಸಿರು ನಿನ್ನ ಬದಲಾವಣೆಗಾಗಿ….
ತರಲಿ ಹೊಸತನ
ತೊಲಗಲಿ ಹಗೆತನ…
ಬದುಕು ಹಸನಾಗಲಿ….
ರಮದಾನ್ ನಿನ್ನ ಮೇಲೆ ಕರುಣೆಯಾಗಲಿ.

ರೈಹಾನ್ ವಿ.ಕೆ.
ಸಚೇರಿಪೇಟೆ