ತಬ್ಲೀಗ್‍ನವರನ್ನು ಹಿಡಿದು ಕೊಟ್ಟರೆ ಬಹುಮಾನ ಎಂದು ಘೋಷಿಸಿದ್ದ ಹಿಂದೂ ಯುವ ವಾಹಿನಿ ನಾಯಕ ಕೊರೋನಕ್ಕೆ ಬಲಿ

0
1744

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.12: ತಬ್ಲೀಗ್ ಜಮಾಅತ್ ಸದಸ್ಯರನ್ನು ಹಿಡಿದುಕೊಟ್ಟರೆ 11,000 ರೂಪಾಯಿ ಬಹುಮಾನ ಎಂಬುದಾಗಿ ಘೋಷಿಸಿದ್ದ ಉತ್ತರ ಪ್ರದೇಶದ ತೀವ್ರ ಹಿಂದುತ್ವ ಸಂಘಟನೆಯ ನಾಯಕ ಕೊರೋನದಿಂದ ಮೃತಪಟ್ಟಿದ್ದಾರೆ.

ಹಿಂದೂ ಯುವವಾಹಿನಿ ನಾಯಕ ಅಜಯ್ ಶ್ರೀವಾಸ್ತವ ಯಾನೆ ಅಜ್ಜು ಹಿಂದುಸ್ತಾನಿ ಕಳೆದ ದಿವಸ ಮೃತಪಟ್ಟರು. ಇವರ ತಾಯಿ ಮತ್ತು ಸಹೋದರಿ ಕೊರೋನದಿಂದ ಮೃತ ಪಟ್ಟಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಥಾಪಿಸಿದ ಸಂಘಟನೆ ಹಿಂದೂ ಯುವ ವಾಹಿನಿಯಾಗಿದೆ. ಅಜ್ಜೂ ಶ್ರೀವಾಸ್ತವ ಇದರ ಸಕ್ರಿಯ ನಾಯಕನಾಗಿದ್ದರು. ಯೋಗಿಯ ಬಲಗೈಯಯಾಗಿದ್ದ ಇವರು ಯೋಗಿಯ ಹನುಮಾನ್ ಎಂದು ಪರಿಚಿತರಾಗಿದ್ದರು.

ಲಾಕ್‍ಡೌನ್ ಮೊದಲು ತಬ್ಲೀಗ್ ಕೇಂದ್ರವಾದ ನಿಝಾಮುದ್ದೀನ್ ಮರ್ಕಝ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಕರೋನ ಇದೆ ಎಂದು ಸುದ್ದಿಯಾದ ಬೆನ್ನಿಗೆ ಅಜ್ಜು ವಿವಾದಿತ ಹೇಳಿಕೆ ನೀಡಿದ್ದರು.

ತಬ್ಲೀಗ್ ಸದಸ್ಯರನ್ನು ಹಿಡಿದು ಸ್ಥಳೀಯ ಆಡಳಿತದ ಮುಂದೆ ಹಾಜರು ಪಡಿಸಿದರೆ ಹಿಂದೂ ಯುವ ವಾಹಿನಿ 11,000 ರೂ. ಬಹುಮಾನ ನೀಡುವುದೆಂದು ಅವರು ಘೋಷಿಸಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.