ಅಕ್ಷರ ಸಂತ ಹಾಜಬ್ಬ: ಒಂದು ಶೈಕ್ಷಣಿಕ ಕ್ರಾಂತಿಯ ಹಿರಿಮೆ

0
356

ಸನ್ಮಾರ್ಗ ವಾರ್ತೆ

✍️K.T. ವಿಬೀಶ್, ಮಾಧ್ಯಮಂ

60 ವರ್ಷ ಮೇಲ್ಪಟ್ಟ ಹಾಜಬ್ಬನವರು ಬಡ ವರ್ಗದ ಸುಮಾರು 250 ಮಕ್ಕಳಿಗೆ ಶಿಕ್ಷಣದ ಬೆಳಕನ್ನು ತಂದುಕೊಟ್ಟಿದ್ದಾರೆ. ಅವರ ಕಣ್ಣುಗಳಲ್ಲಿ ಜ್ಞಾನಕ್ಕಾಗಿ ಅತಿಯಾದ ಉತ್ಸಾಹವನ್ನು ಕಾಣಬಹುದು.

ಹಾಜಬ್ಬ ಅವರ ಶೈಕ್ಷಣಿಕ ಕ್ರಾಂತಿಯನ್ನು ‘ಹೊಸದಿಗಂತ’ ಕನ್ನಡ ಪತ್ರಿಕೆಯು ಪ್ರಕಟಿಸಿತ್ತು. ನಂತರ ಲೇಖಕ ಇಸ್ಮತ್ ಪಜೀರ್ ಹಾಜಬ್ಬ ಕುರಿತಂತೆ ಒಂದು ಪುಸ್ತಕವನ್ನು ಬರೆದರು. ಇದರಿಂದಾಗಿ ಹಾಜಬ್ಬ ಮತ್ತು ಹರೇಕಳ ಹಾಜಬ್ಬ ಅವರ ಶ್ರೇಷ್ಠ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮನ್ನಣೆ ದೊರೆಯಿತು.

CNN-IBN ಹಾಜಬ್ಬ ಅವರಿಗೆ ‘ರಿಯಲ್ ಹೀರೋ’ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಕುರಿತ ಲೇಖನವನ್ನು ‘ಅನ್ಲೆಟರ್ಡ್ ಫ್ರೂಟ್ ಸೆಲ್ಲರ್’ ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸಿದರು. ಹಾಜಬ್ಬ ಅವರ ಸಾಧನೆ ಕರ್ನಾಟಕದ ಕಾಲೇಜು ಪಠ್ಯ ಕ್ರಮದಲ್ಲೂ ಸೇರಿಸಲಾಯಿತು. ನಂತರ 2020ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

“ಶಿಕ್ಷಣವು ಅತ್ಯಂತ ಮಹತ್ವದ್ದಾಗಿದೆ. ಜ್ಞಾನವಿಲ್ಲದೆ ಯಾರೂ ಪ್ರಗತಿ ಸಾಧಿಸಲು ಸಾಧ್ಯವಿಲ್ಲ,” ಎಂದು ಹಾಜಬ್ಬ ಅಭಿಪ್ರಾಯ ಪಟ್ಟಿದ್ದಾರೆ. ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ , ಇಂದಿನ ಮತ್ತು ಮಾಜಿ ಜನಪ್ರತಿನಿಧಿಗಳು ಅವರ ಶಾಲೆಗೆ ಅಗತ್ಯ ಸಹಾಯ ನೀಡಿ ಬೆಂಬಲಿಸುತ್ತಿದ್ದಾರೆ. ಇದೀಗ ನಮ್ಮ ಶಾಲೆಗೆ ಸರ್ಕಾರವು ಪದವಿ ಪೂರ್ವ ಕಾಲೇಜನ್ನು ನಡೆಸಲು ಅನುಮೋದನೆ ನೀಡಿದೆ. ಒಂದು ಎಕರೆಗಿಂತ ಜಾಸ್ತಿ ಸ್ಥಳವನ್ನೂ ನೀಡಿದೆ. ಅದಕ್ಕಾಗಿ ಕಟ್ಟಡ ನಿರ್ಮಾಣವೇ ಮುಂದಿನ ಗುರಿ.
ಕಟ್ಟಡ ನಿರ್ಮಾಣಕ್ಕಾಗಿ ಯಾರಾದರೂ ಸಹಾಯಹಸ್ತ ಚಾಚುವರು ಎಂಬ ದೃಢವಿಶ್ವಾಸವಿದೆ.

ನನ್ನ ದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗಬೇಕು ಎಂಬುದೇ ನನ್ನ ಜೀವನದ ಪ್ರಾರ್ಥನೆ,” ಎಂದು ಹಾಜಬ್ಬ ಮಾಧ್ಯಮಂ’ ಪತ್ರಿಕೆಗೆ ತಿಳಿಸಿದ್ದಾರೆ. ಹಾಜಬ್ಬ ಅವರು ಚೇವಾಯೂರಿನಲ್ಲಿ ನಡೆದ ಶಿಬಿರದಲ್ಲಿ ಭಾಗವಹಿಸಲು ಕೋಝಿಕ್ಕೋಡ್‌ಗೆ ಬಂದಿದ್ದರು.