ಸನ್ಮಾರ್ಗ ವಾರ್ತೆ
ಹೈದರಾಬಾದ್: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (ಐಟಾ) ಇದರ ಎರಡು ದಿನಗಳ ರಾಷ್ಟ್ರೀಯ ಸಭೆ ಫೆ. 26-27, 2021 ರಂದು ಹೈದರಾಬಾದ್ ನ ಜಮಿಯತ್-ಉಲ್-ಹುದಾ ಪಹಾಡಿ ಷರೀಫ್ನಲ್ಲಿ ನಡೆಯಿತು.
ಸಭೆಯಲ್ಲಿ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಎಂ.ಆರ್.ಮಾನ್ವಿಯವರು ಸರ್ವಾನುಮತದಿಂದ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಯಾಸೀನ್ ಬಿಕ್ಬಾರವರನ್ನು ನೇಮಕ ಮಾಡಲಾಯಿತು. ಕರ್ನಾಟಕ ರಾಜ್ಯ ಮಹಿಳಾ ವಿಭಾಗದ ಸಂಚಾಲಕಿಯರನ್ನಾಗಿ ಉತ್ತರ ಕರ್ನಾಟಕದ ಶ್ರೀಮತಿ ಬಿಲ್ಕಿಸ್ ಫಾತಿಮಾ ಬೀದರ್ ಮತ್ತು ದಕ್ಷಿಣ ಕರ್ನಾಟಕದ ಶ್ರೀಮತಿ ನಸೀಮಾ ಅಫ್ಸರಿ ಬೆಂಗಳೂರುರವರನ್ನು ನೇಮಕ ಮಾಡಲಾಗಿದೆ. ಕರ್ನಾಟಕದ ಸ್ಥಳೀಯ ಮತ್ತು ಜಿಲ್ಲಾಧ್ಯಕ್ಷರ ಚುನಾವಣೆಗಳು ನಡೆಯುತ್ತಿದ್ದು, ಇದು ಫೆಬ್ರವರಿ 28 ರಿಂದ ಮಾರ್ಚ್ 7ರವರೆಗೆ ಪೂರ್ಣಗೊಳ್ಳಲಿದೆ.
ಎಲ್ಲಾ ರಾಜ್ಯಗಳು ತಮ್ಮದೇ ಆದ ಕಾರ್ಯಕ್ರಮಗಳನ್ನು ರೂಪಿಸುವ ಬೆಳಕಿನಲ್ಲಿ ಕೇಂದ್ರ ನೀತಿ ಮತ್ತು ಕಾರ್ಯಕ್ರಮವನ್ನು ರೂಪಿಸಲಾಗುವುದು. ನೂತನ ಆಯ್ಕೆಯಾದ ರಾಜ್ಯಾಧ್ಯಕ್ಷರಾದ ಎಂ.ಆರ್. ಮಾನ್ವಿ, ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ತಮ್ಮ ಯೋಜನೆಗಳನ್ನು ಮುಂದಿಟ್ಟರು.
ಈ ಸಂದರ್ಭದಲ್ಲಿ ನೂತನ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ರಹೀಂ ಶೇಖ್ ಮಹಾರಾಷ್ಟ್ರ, ರಾಷ್ಟ್ರೀಯ ಉಪಾಧ್ಯಕ್ಷ ಮುಖ್ತಾರ್ ಆಹ್ಮದ್ ಕೊತ್ವಾಲ್, ಐಟಾ ರಾಜ್ಯ ಸಮಿತಿ ಸದಸ್ಯರಾದ ಮುಬೀನ್ ಉಳ್ಳಾಲ, ಡಾ. ಸನಾಉಲ್ಲಾ ಶರೀಫ್ ಬೆಂಗಳೂರು, ಅಲ್ತಾಫ್ ಅಮ್ಜದ್, ಇಫ್ತೇಖಾರ್ ಅಹ್ಮದ್ ಬಸವ ಕಲ್ಯಾಣ ಉಪಸ್ಥಿತರಿದ್ದರು.












