ಅನ್ಸಾರ್ ಶೇಖ್ ಇದೀಗ ಭಾರತದ ಅತ್ಯಂತ ಕಿರಿಯ ಐ.ಎ.ಎಸ್ ಅಧಿಕಾರಿ

0
8656

ಸನ್ಮಾರ್ಗ ವಾರ್ತೆ

ಮಹಾರಾಷ್ಟ್ರದ ಮರಾಠವಾಡದಲ್ಲಿ ಜೀವನ ಸಾಗಿಸಲು ಯೂನುಸ್ ಶೇಖ್ ಆಟೋ ಒಡಿಸುತ್ತಿದ್ದಾರೆ.  ಯೂನುಸ್ ಅವರ ಮಗ ಅನ್ಸಾರ್ ಶೇಖ್ ಎಲ್ಲಾ ಕಷ್ಟ ಕಾರ್ಪಣ್ಯಗಳ ನಡುವೆಯೂ ಕಠಿಣ ಪರಿಶ್ರಮದಿಂದ ಭಾರತದ ಅತ್ಯಂತ ಕಿರಿಯ IAS ಅಧಿಕಾರಿಯಾಗಿ ಮೂಡಿಬಂದಿದ್ದಾರೆ.

ಕುಡಿತದ ಚಟದಿಂದಾಗಿ ತನ್ನ ತಂದೆಯಿಂದ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಅನ್ಸಾರ್‌ನ ಜೀವನ ಬಾಲ್ಯದಲ್ಲಿ ಕಠಿಣವಾಗಿತ್ತು.  ಅನ್ಸಾರ್‌ನ ಕಿರಿಯ ಸಹೋದರ ಅನೀಸ್ ಕುಟುಂಬವನ್ನು ಪೋಷಿಸಲು ಏಳನೇ ತರಗತಿಯಲ್ಲಿ ಶಾಲೆಯನ್ನು ತ್ಯಜಿಸಬೇಕಾಯಿತು ಮತ್ತು ಅನ್ಸಾರ್‌ಗೆ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಲು ಸಹಾಯ ಮಾಡಬೇಕಾಯಿತು.

ಅನ್ಸಾರ್ 2016 ರಲ್ಲಿ ತನ್ನ 21 ನೇ ವಯಸ್ಸಿನಲ್ಲಿ ಮೊದಲ ಪ್ರಯತ್ನದಲ್ಲಿ ಕಠಿಣವಾದ UPSC ಪರೀಕ್ಷೆಯನ್ನು ತೇರ್ಗಡೆ ಹೊಂದಿದರು ಮತ್ತು ಭಾರತದ ಅತ್ಯಂತ ಕಿರಿಯ IAS ಅಧಿಕಾರಿ ಎಂಬ ಇತಿಹಾಸವನ್ನು ಸೃಷ್ಟಿಸಿದರು. ಕೌಟುಂಬಿಕ ಸಮಸ್ಯೆಯಿಂದಾಗಿ ಬಾಲ್ಯ ಕಳೆದು ಕೊಂಡಿರುವ ಅನ್ಸಾರ್ ಅವರ ಸಾಧನೆ ಶ್ಲಾಘನೀಯ.

ಐಎಎಸ್ ತೇರ್ಗಡೆಯಾಗುವ ಹೋರಾಟವನ್ನು ಗೆಲ್ಲಲು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಸಹಾಯ ಮಾಡಿದ ತನ್ನ ಸ್ನೇಹಿತರೇ ನನ್ನ ಶಕ್ತಿ ಎಂದು ಕೃತಜ್ಞರಾಗಿರುವ ಅನ್ಸಾರ್ ಹೇಳುತ್ತಾರೆ. ಅನ್ಸಾರ್‌ಗೆ ಐಎಎಸ್‌ಗೆ ತರಬೇತಿ ನೀಡಿದ ಅಕಾಡೆಮಿ ಕೂಡ ಅವರು ದುರ್ಬಲ ಆರ್ಥಿಕ ಹಿನ್ನೆಲೆಯಿಂದ ಬಂದವರು ಎಂಬ ಅಂಶವನ್ನು ಪರಿಗಣಿಸಿ ಭಾಗಶಃ ಶುಲ್ಕವನ್ನು ಮನ್ನಾ ಮಾಡಿದೆ.

ಐಎಎಸ್ ಆಕಾಂಕ್ಷಿಗಳಿಗೆ ನೀಡಿದ ಸಂದೇಶವೊಂದರಲ್ಲಿ ಅನ್ಸಾರ್ ಶೇಖ್ ಅವರು ಸ್ಪರ್ಧೆಯು ಸ್ವಯಂ ನಮ್ಮೊಂದಿಗೆ ಮಾತ್ರ ಎಂದು ಯೋಚಿಸಬೇಕು. ಇತರ ಐಎಎಸ್ ಆಕಾಂಕ್ಷಿಗಳೊಂದಿಗೆ ಅಲ್ಲ ಎಂಬುವುದನ್ನು ಅರಿತು ಬರೆಯಬೇಕು ಎಂದಿದ್ದಾರೆ.