ಪ್ರಮಾಣವಚನ ಸಮಾರಂಭವನ್ನು ಸರಳಗೊಳಿಸಲು ಸ್ಟಾಲಿನ್ ನಿರ್ಧಾರ

0
113

ಸನ್ಮಾರ್ಗ ವಾರ್ತೆ

ಚೆನ್ನೈ: ಕೊರೋನ ಹರಡುವಿಕೆಯ ಹಿನ್ನೆಲೆಯಲ್ಲಿ ಸರಕಾರದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ಸರಳವಾಗಿ ಮಾಡಿ ಮುಗಿಸಲು ತೀರ್ಮಾನಿಸಿರುವುದಾಗಿ ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಹೇಳಿದರು.

ಚೆನ್ನೈಯ ಮರೀನ ಬೀಚ್‍ನಲ್ಲಿರುವ ಕರುಣಾ ನಿಧಿಯವರ ಸಮಾಧಿಗೆ ಸ್ಟಾಲಿನ್ ಪುಷ್ಪಾರ್ಚನೆ ಮಾಡಿದರು. ನಂತರ ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತಾಡುತ್ತಾ ಪ್ರಮಾಣ ವಚನ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡುವ ಉದ್ದೇಶವಿಲ್ಲ. ಸರಳವಾಗಿ ಮಾಡುವ ಯೋಚನೆ ಇದೆ. ಪ್ರಮಾಣವಚನ ದಿನಾಂಕ ಮತ್ತು ಸಮಯವನ್ನು ನಂತರ ತಿಳಿಸುವುದಾಗಿ ಹೇಳಿದರು.

ಆದರೆ ಮೇ 7ಕ್ಕೆ ಡಿಎಂಕೆ ಸರಕಾರ ಅಧಿಕಾರಕ್ಕೆ ಬರಲಿದೆ ಎಂಬುದಾಗಿ ಸೂಚನೆಗಳು ಲಭಿಸಿದ್ದು, ಅಂದು ಪ್ರಮಾಣವಚನ ಕಾರ್ಯಕ್ರಮವನ್ನು ಡಿಎಂಕೆ ಇಟ್ಟುಕೊಳ್ಳಲಿದೆ ಎನ್ನಲಾಗಿದೆ. ಒಟ್ಟು 149 ಸೀಟುಗಳನ್ನು ಡಿಎಂಕೆ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿದೆ. ಸ್ಟಾಲಿನ್ ಮತದಾರರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here