ತಮಿಳುನಾಡು: ಪಕ್ಷದ ಗೆಲುವಿಗೆ ನಾಲಗೆ ಕತ್ತರಿಸಿ ಮಂದಿರಕ್ಕೆ ಅರ್ಪಿಸಿದ ಡಿಎಂಕೆ ಕಾರ್ಯಕರ್ತೆ..!

0
488

ಸನ್ಮಾರ್ಗ ವಾರ್ತೆ

ಚೆನ್ನೈ: ತಮಿಳ್ನಾಡಿನ ವಿಧಾನಸಭಾ ಚುನಾವಣೆಯಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಜಯಿಸಿದ್ದು ಪಾರ್ಟಿಗಾಗಿ 32ವರ್ಷದ ಮಹಿಳೆಯೊಬ್ಬರು ತನ್ನ ನಾಲಗೆಯನ್ನು ಕತ್ತರಿಸಿ ದೇವಸ್ಥಾನಕ್ಕೆ ಅರ್ಪಿಸಿದ ಆಘಾತಕಾರಿ ಘಟನೆ ರಾಮನಾಥಪುರಂನಲ್ಲಿ ನಡೆದಿದೆ.

ಜಿಲ್ಲೆಯ ಮುದಲಮ್ಮನ್ ದೇವಸ್ಥಾನಕ್ಕೆ ಬಂದ ಡಿಎಂಕೆ ಕಾರ್ಯಕರ್ತೆ ಡಿಎಂಕೆ ಗೆಲುವು ಖಚಿತವಾದುದನ್ನು ನೋಡಿ ನಾಲಿಗೆ ಕತ್ತರಿಸಿದರು. ಕೊರೊನ ನಿಯಂತ್ರಣವಿದ್ದರಿಂದ ದೇಗುಳದೊಳಗೆ ಹೋಗಲು ಆಗಲಿಲ್ಲ. ಆದುದರಿಂದ ದೇಗುಲದ ಬಾಗಿಲ ಬಳಿಯಲ್ಲಿ ನಾಲಗೆ ಕತ್ತರಿಸಿದರು. ಕೂಡಲೇ ಬಸವಳಿದು ಮಹಿಳೆ ಬಿದ್ದರು. ಅಲ್ಲಿದ್ದವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹತ್ತು ವರ್ಷದ ನಂತರ ಡಿಎಂಕೆ ತಮಿಳ್ನಾಡಿನಲ್ಲಿ ಅಧಿಕಾರಕ್ಕೆ ಮರಳಿದೆ. ಎಂಜಿಆರ್ ಎಂಕೆಯನ್ನು ವಿಭಜಿಸಿ ಎಐಡಿಎಂಕೆ ಮಾಡಿ 1977ರಿಂದ 1988ರವರೆಗೆ ಮುಖ್ಯಮಂತ್ರಿಯಾಗಿದ್ದರು. ಅಷ್ಟೂ ಕಾಲ ಜಯಲಲಿತಾರವರು ಮುಖ್ಯಮಂತ್ರಿಯಾದ ಮೇಲೆ ಡಿಎಂಕೆ ಅಧಿಕಾರದಿಂದ ಹೊರಗಿತ್ತು.