ಸನ್ಮಾರ್ಗ ವಾರ್ತೆ
ಮುಂಬೈ,ನ.12: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ರಿಪಬ್ಲಿಕ್ ಟಿವಿ ಎಡಿಟರ್ ಇನ್ ಚೀಪ್ ಅರ್ನಬ್ ಗೋಸ್ವಾಮಿ ಸವಾಲು ಹಾಕಿದ್ದಾರೆ. ಆತ್ಮಹತ್ಯೆ ಪ್ರೇರಣೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಅರ್ನಬ್ ಗೋಸ್ವಾಮಿಗೆ ಜಾಮೀನು ಸಿಕ್ಕಿದ ಬೆನ್ನಿಗೆ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರನ್ನು ಕಟುವಾಗಿ ಟೀಕಿಸಿದ್ದಾರೆ.
ಒಂದು ವಾರದ ಜ್ಯೂಡಿಶಿಯಲ್ ಕಸ್ಟಡಿಯ ಬಳಿಕ ಬುಧವಾರ 8:30ಕ್ಕೆ ಗಲೊಜ ಜೈಲಿನಿಂದ ಹೊರಬಂದ ಅರ್ನಬ್ರನ್ನು ರಿಪಬ್ಲಿಕ್ ಟಿವಿ ಕಚೇರಿಯ ಸಹೋದ್ಯೋಗಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ‘ಉದ್ಧವ್ ಠಾಕ್ರೆ, ನಾನು ಹೇಳುವುದನ್ನು ಗಮನವಿಟ್ಟು ಕೇಳಿ, ನೀವು ತಪ್ಪು ಮಾಡಿದ್ದೀರಿ. ನೀವು ಸೋತಿದ್ದೀರಿ. ಒಂದು ಸುಳ್ಳು ಪ್ರಕರಣದಲ್ಲಿ ನನ್ನನ್ನು ಬಂಧಿಸಿದಿರಿ. ನನ್ನೊಂದಿಗೆ ಕ್ಷಮೆಯನ್ನು ಯಾಚಿಸಿಲ್ಲ ಎಂದು ಅರ್ನಬ್ ಹೇಳಿದರು. ಮುಂಬೈ ಪೊಲೀಸ್ ಕಮಿಷನರ್ ಪರಂ ಬೀರ್ ಸಿಂಗ್ ತನ್ನನ್ನು ಅನ್ಯಾಯವಾಗಿ ಬಂಧಿಸಿದರೆಂದು ಅರ್ನಬ್ ಟೀಕಿಸಿದರು.
ಇನ್ನು ಆಟ ಶುರುವಾಗಲಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಅರ್ನಬ್ ಹೇಳಿದರು. ರಿಪಬ್ಲಿಕ್ ಟಿವಿ ಎಲ್ಲ ಭಾಷೆಯಲ್ಲಿ ಬರಲಿದೆ. ಜೈಲಿನೊಳಗಿನಿಂದಲೂ ಚ್ಯಾನೆಲ್ ಲಾಂಚ್ ಮಾಡುವೆ. ನಿಮಗೆ(ಉದ್ಧವ್ ಠಾಕ್ರೆಗೆ) ಏನು ಮಾಡಲು ಸಾಧ್ಯ? ಎಂದು ಅರ್ನಬ್ ಪ್ರಶ್ನಿಸಿದರು. ಮರಾಠಿಯಲ್ಲಿಯೂ ಅರ್ನಬ್ ಮಾತಾಡಿದರು. ಜೈ ಮಹಾರಾಷ್ಟ್ರ ಎಂದು ಹೇಳುತ್ತಾ ಅರ್ನಬ್ ಮಾತು ಮುಗಿಸಿದರು.
ಬುಧವಾರ ರಾತ್ರೆ 8:30ಕ್ಕೆ ಅರ್ನಬ್ ಹೊರಬಂದಿದ್ದಾರೆ. ಜಾಮೀನು ನೀಡಬಾರದೆಂದು ವಾದಿಗಳ ಪರ ವಕೀಲ ಕಪಿಲ್ ಸಿಬಲ್ ವಾದಿಸಿದರೂ ಸುಪ್ರೀಂ ಕೋರ್ಟು ತಿರಸ್ಕರಿಸಿದೆ. ಜಸ್ಟಿಸ್ ಚಂದ್ರ ಚೂಡಾ, ಇಂದಿರಾ ಬ್ಯಾನರ್ಜಿ ಅರ್ಜಿಯನ್ನು ಪರಿಗಣಿಸಿದ್ದಾರೆ. ಅರ್ನಬ್ಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂಬೈ ಹೈಕೋರ್ಟು ತಿರಸ್ಕರಿಸಿತ್ತು.












