ವಿಧಿ 370 ಹೆಚ್ಚು ಕಾಲ ಮುಂದುವರಿಯಬೇಕಾದ್ದಿಲ್ಲ; ಪಾರ್ಟಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ತರೂರ್

0
606

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ. 5: ಮೋದಿಯನ್ನು ಹೊಗಳಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ ಸಂಸದ ಶಶಿ ತರೂರ್ ಕಾಶ್ಮೀರದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ಹೆಚ್ಚು ಕಾಲ ಮುಂದುವರಿಯಬೇಕಾಗಿಲ್ಲ ಎಂದು ಹೇಳಿದರು. ಆದರೆ ಕಾನೂನು ಜಾರಿಗೆ ತಂದ ರೀತಿ ಸಂವಿಧಾನ ವಿರೋಧಿಯಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‍ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಇತರ ಧರ್ಮೀಯರ ಆರಾಧನಾ ಸ್ವಾತಂತ್ರ್ಯವನ್ನು ದಮನಿಸದೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬಹುದು. ಆದರೆ ಅಯೋಧ್ಯೆಗೆ ಸಂಬಂಧಿಸಿದ ಇತಿಹಾಸ ಆಳವಾಗಿ ಪರಿಶೀಲಿಸಿದರೆ ಅಲ್ಲಿ ದೇವಸ್ಥಾನ ಇತ್ತು ಎನ್ನುವುದು ಸ್ಪಷ್ಟವಾಗಿದೆ. ಜನರ ವಿಶ್ವಾಸ ಅದೊಂದು ರಾಮಮಂದಿರ. ಆದರೆ ಇದಕ್ಕೆ ಸಂಬಂಧಿಸಿ ಆಳದಲ್ಲಿ ತಳವೂರಿದ ವಿಶ್ವಾಸ ಜನರ ನಡುವೆ ಇದೆ ಎಂದು ತರೂರ್ ಹೇಳಿದರು. ಇತ್ತೀಚೆಗೆ ತರೂರ್ ಮೋದಿಯನ್ನು ಹೊಗಳಿದ್ದರು. ಅವರನ್ನು ಕಾಂಗ್ರೆಸ್ ನಾಯಕರಲ್ಲಿ ಕೆಲವರು ಪ್ರಶ್ನಿಸಿದ್ದರು. ಘಟನೆಯಲ್ಲಿ ಕೆಪಿಸಿಸಿ ತರೂರ್ ವಿವರಣೆ ನೀಡಿದ ಬಳಿಕ ವಿವಾದ ತಣ್ಣಗಾಗಿತ್ತು.