ಕೊರೋನ ನಿಯಮ ಪಾಲಿಸಲು ಸೂಚಿಸಿದ ಪೊಲೀಸರಿಗೆ ಹಲ್ಲೆ ಮಾಡಿದ ಗುಂಪು: 12 ಮಂದಿಯ ಬಂಧನ

0
565

ಸನ್ಮಾರ್ಗ ವಾರ್ತೆ

ಭುವನೇಶ್ವರ: ಒಡಿಶಾದಲ್ಲಿ ಕೊರೋನ ಮಾನದಂಡಗಳನ್ನು ಪಾಲಿಸಲು ಹೇಳಿದ ಪೊಲೀಸ್ ಸಿಬ್ಬಂದಿಗಳಿಗೆ ಜನರ ಗುಂಪು ಥಳಿಸಿದ ಘಟನೆ ನಡೆದಿದ್ದು, ಘಟನೆ ಸಂಬಂಧ ಹನ್ನೆರಡು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಯೂರ್ ಬಂಚ್ ಜಿಲ್ಲೆಯ ದೇಬನ್‍ಬಹಾಲಿ ಗ್ರಾಮದಲ್ಲಿ ಘಟನೆ ನಡೆದಿದೆ.

ಶನಿವಾರ ಸಂಜೆ ಗ್ರಾಮದಲ್ಲಿ ಚೇತಿ ಚರ್ಬ ಆಚರಣೆ ನಡೆಯುತ್ತಿತ್ತು. ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಇದೇ ವೇಳೆ ಇಲ್ಲಿಗೆ ಎಎಸ್‍ಯ ಬಿಶ್ವಜಿತ್ ದಾಸ್ ಮಹಾ ಪಾತ್ರರ ನೇತೃತ್ವದ ಪೊಲೀಸರ ತಂಡವು ಸಾಮಾಜಿಕ ಅನಂತರ ಇಲ್ಲದೆ ಹೀಗೆ ಒಟ್ಟು ಸೇರುವುದು ಕೋರೋನ ಹರಡಬಹುದು ಎಂದು ಎಚ್ಚರಿಸಿದ್ದರು. ಅಲ್ಲದೆ ಕೋವಿಡ್ ನಿಯಮ ಪಾಲಿಸುವಂತೆ ತಿಳಿಸಿದ್ದರು. ಆದರೆ ,ಪೊಲೀಸರ ಮಾತನ್ನು ಧಿಕ್ಕರಿಸಿ ಸ್ಥಳದಲ್ಲಿದ್ದ ಸಾರ್ವಜನಿಕರು ದಂಡ, ಕೋಲು ಇತ್ಯಾದಿಯಿಂದ ಪೊಲೀಸರಿಗೆ ಹೊಡೆದು ಓಡಿಸಿದ್ದಾರೆ.

ಹಲ್ಲೆಯ ವೇಳೆ ಮೂವರು ಪೊಲೀಸರು ಗಾಯಗೊಂಡಿದ್ದರು.ಅಲ್ಲದೆ ಪೊಲೀಸ್ ವಾಹನಕ್ಕೂ ಹಾನಿ ಮಾಡಲಾಗಿತ್ತು. ಟನೆ ಸಂಬಂಧ ಹನ್ನೆರಡು ಮಂದಿಯನ್ನು ಸದ್ಯ ಪೊಲೀಸರು ಬಂಧಿಸಿದ್ದು, ಇನ್ನಷ್ಟು ಮಂದಿ ಆರೋಪಿಗಳನ್ನು ಬಂಧಿಸಲಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊರೋನ ಪ್ರಕರಣಗಳು ಹೆಚ್ಚಿದ್ದರ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ವಾರಾಂತ್ಯ ಕರ್ಫ್ಯೂ ಹಾಕಲಾಗಿದೆ. ಆದರೆ ಇವು ಯಾವುದನ್ನೂ ಪಾಲಿಸಲು ಗ್ರಾಮ ವಾಸಿಗಳು ಸಿದ್ಧರಿಲ್ಲ. ಮನೆಯಿಂದ ಹೊರ ಬರುತ್ತಿದ್ದಾರೆ ಎಂದು ವರದಿಯಾಗಿದೆ.