ಅಸ್ಸಾಂ ಉಪಚುನಾವಣೆ: 4 ಸೀಟುಗಳಿಗೆ ಕಾಂಗ್ರೆಸ್‍ಗೆ ಬೆಂಬಲ ಘೋಷಿಸಿದ ಸಿಪಿಎಂ

0
475

ಸನ್ಮಾರ್ಗ ವಾರ್ತೆ

ಗುವಾಹಟಿ: ಅಸ್ಸಾಮಿನ ಉಪಚುನಾವಣೆಯಲ್ಲಿ ಐದು ಸೀಟುಗಳಲ್ಲಿ ನಾಲ್ಕರಲ್ಲಿ ಕಾಂಗ್ರೆಸ್‍ಗೆ ಬೆಂಬಲವನ್ನು ಸಿಪಿಂಎ ಘೋಷಿಸಿದೆ. ಒಂದು ಸೀಟಿನಲ್ಲಿ ಸಿಪಿಐಅನ್ನು ಅದು ಬೆಂಬಲಿಸಲಿದೆ. ಅಕ್ಟೋಬರ್ 30ಕ್ಕೆ ಚುನಾವಣೆ ನಡೆಯಲಿದೆ.

ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿ ನೇತೃತ್ವದ ಸಖ್ಯ ಅಸ್ಸಾಮಿನ ಜನರ ಮೇಲೆ ದ್ರೋಹವೆಸಗಿದೆ. ರಾಜ್ಯದಲ್ಲಿ ನಿರುದ್ಯೋಗ, ಬೆಲೆ ಏರಿಕೆಯನ್ನು ತಡೆಯಲು ಅವರು ಮುಂದಾಗಿಲ್ಲ. ಬಿಜೆಪಿಗೊ ಅವರ ಸಖ್ಯ ಪಕ್ಷ ಅಸ್ಸಾಂ ಗಣ ಪರಿಷತ್, ಯುಪಿಪಿಎಲ್‍ಗೆ ಮತ ಹಾಕಬೇಡಿ ಎಂದು ಸಿಪಿಎಂ ಹೇಳಿಕೆ ಹೊರಡಿಸಿದೆ.

ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸಿನ ಮಹಾಸಖ್ಯದಲ್ಲಿ ಸಿಪಿಎಂ ಇತ್ತು. ಶಾಸಕರು ನಿಧನರಾದ ಹಿನ್ನೆಲೆಯಲ್ಲಿ ಮತ್ತು ಬಿಜೆಪಿಗೆ ಪಕ್ಷಾಂತರಗೊಂಡ ಕಾರಣದಿಂದ ಅಲ್ಲಿ ಐದು ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ. 126 ಶಾಸಕರ ವಿಧಾನಸಭೆಯಲಿ ಬಿಜೆಪಿಗೆ 59 ಸ್ಥಾನಗಳಿವೆ. ಸಖ್ಯಪಕ್ಷ ಎಜಿಗೆ ಒಂಬತ್ತು, ಯುಪಿಪಿಎಲ್‍ಗೆ ಐದು ಸೀಟುಗಳಿವೆ. ಕಾಂಗ್ರೆಸ್‍ಗೆ 29 ಸೀಟುಗಳಿವೆ. ಸಖ್ಯ ಪಕ್ಷವಾಗಿದ್ದ ಎಐಯುಡಿಎಫ್‍ಗೆ 15 ಸೀಟುಗಳಿವೆ. ಸಿಪಿಎಂಗೆ ಒಂದು ಸೀಟು ಲಭಿಸಿದೆ.