ಪೌರತ್ವ ಕಳಕೊಳ್ಳುವ ಭೀತಿ: ಅಸ್ಸಾಂನಲ್ಲಿ ವೃದ್ಧನಿಂದ ಆತ್ಮಹತ್ಯೆ

0
676

ಗುವಾಹಟಿ,ಮೇ 28: ರಾಷ್ಟ್ರೀಯ ಪೌರತ್ವ ನೋಂದಣಿಯಿಂದ ತೆಗೆದು ಹಾಕಬಹುದು ಎಂದು ಹೆದರಿದ ಎಂಬತ್ತೆಂಟು ವರ್ಷದ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿದ್ದಾರೆ. ಕಂರೂಪ್ ಜಿಲ್ಲೆಯ ಸೋಂದಾಳಿ ಗ್ರಾಮದ ಅಶ್ರಫ್ ಅಲಿ ಮನೆಯ ಸಮೀಪದ ಶಾಲೆಯಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದಾರೆ. ಪೌರತ್ವ ಪಟ್ಟಿಯಲ್ಲಿ ಅಶ್ರಫ್ ಅಲಿಯವರನ್ನು ಸೇರಿಸಿದ್ದನ್ನು ಪ್ರಶ್ನಿಸಿ ದೂರು ಇದ್ದು ಪರಿಶೀಲನೆಗೆ ಈ ತಿಂಗಳು 23ಕ್ಕೆ ಹಾಜರಾಗುವಂತೆ ಅಧಿಕಾರಿಗಳು ಹೇಳಿದ್ದರು ಎಂದು ಮನೆಯವರು ತಿಳಿಸಿದರು.

ಶನಿವಾರ ಉಪವಾಸ ತೊರೆಯುವ ಆಹಾರ ಖರೀದಿಗೆ ಹೋದ ನಂತರ ಇವರು ಕಾಣೆಯಾಗಿದ್ದರು. ಪೋಸ್ಟ್‍ಮಾರ್ಟಂ ವರದಿಯ ನಂತರವೇ ಸಾವಿನ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದರು. ಪೌರತ್ವ ಪಟ್ಟಿಯಲ್ಲಿ ವಿವರವನ್ನು ಪುನಃ ಪರಿಶೀಲಿಸಲು ಕರೆದದ್ದಕ್ಕಾಗಿ ಅಸ್ಸಾಂನಲ್ಲಿ 23 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸ್ವಯಂಸೇವಾ ಕಾರ್ಯಕರ್ತರು ತಿಳಿಸಿದರು.