ಅಸ್ಸಾಂ; ಗೋಮಾಂಸ ಅಕ್ರಮ ಮಾರಾಟ ವಿರೋಧಿಸಿ ದಾಳಿ: 133 ಬಂಧನ, 1000 ಕೆಜಿ ಮಾಂಸ ವಶ

0
713

ಸನ್ಮಾರ್ಗ ವಾರ್ತೆ

ಗುವಾಹಟಿ: ಅಸ್ಸಾಂ ಸರ್ಕಾರವು ಗೋಮಾಂಸ ಅಕ್ರಮ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ, ರಾಜ್ಯದಾದ್ಯಂತ 112ಕ್ಕೂ ಹೆಚ್ಚು ಆಹಾರ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಮಾತ್ರವಲ್ಲದೆ 1000 ಕೆಜಿಗೂ ಹೆಚ್ಚು ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.

2021ರ ಗೋ ಸಂರಕ್ಷಣಾ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕಾಯ್ದೆ ಪ್ರಕಾರ ಹಿಂದೂ ಬಹುಸಂಖ್ಯಾತ ಪ್ರದೇಶಗಳು ಹಾಗೂ ದೇವಾಲಯಗಳ ಸುತ್ತಮುತ್ತ ಪ್ರಾಣಿಹತ್ಯೆ ನಿಷಿದ್ಧವಾಗಿದೆ.

ದಾಳಿಗಳ ವೇಳೆ 133 ಜನರನ್ನು ಬಂಧಿಸಲಾಗಿದ್ದು, ಹಲವರು ಪರಾರಿಯಾಗಿರುವುದಾಗಿ ವರದಿಯಾಗಿದೆ. ಈದ್ ಹಬ್ಬದ ವೇಳೆಯಲ್ಲಿ ಅಕ್ರಮವಾಗಿ ವಧೆ ಮಾಡಿದ ಆರೋಪದ ಮೇಲೆ 16 ಜನರನ್ನು ಬಂಧಿಸಿದ ನಂತರ ರಾಜ್ಯದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಮಾಂಸ ಮಾರಾಟದ ಮೇಲಿನ ನಿಷೇಧ ಆದೇಶ ಹೊರಡಿಸಲಾಗಿದೆ.