ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಸೆ.11: ಜಿ20 ಶೃಂಗಕ್ಕಾಗಿ ಭಾರತಕ್ಕೆ ಅಧಿಕೃತ ಸಂದರ್ಶನ ನೀಡಿದ ಸೌದಿ ಅರೇಬಿಯದ ರಾಜಕುಮಾರ ಅಮೀರ್ ಬಿನ್ ಸಲ್ಮಾನ್ರ ಜೊತೆ ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್ ಹೌಸ್ನಲ್ಲಿ ಸಮಾಲೋಚನೆ ನಡೆಸಿದರು.
ಭಾರತ- ಸೌದಿ ಅರೇಬಿಯದ ಸಂಬಂಧದಲ್ಲಿ ಹೊಸ ಅಧ್ಯಾಯ ತೆರೆಯುತ್ತಿರುವುದಾಗಿ ಪ್ರಧಾನಿ ಈ ವೇಳೆ ಘೋಷಿಸಿದರು. ವ್ಯಾಪಾರ, ರಕ್ಷಣಾ ಸಹಕಾರದ ಮೇಲೆ ಎರಡು ದೇಶಗಳು ಚರ್ಚಿಸಿವೆ ಎಂದು ವರದಿಗಳು ತಿಳಿಸುತ್ತಿವೆ. ಇಬ್ಬರ ಅಧ್ಯಕ್ಷತೆಯಲ್ಲಿ ಭಾರತ-ಸೌಧಿ ಅರೇಬಿಯ ಸ್ಟ್ರಾಟಜಿಕ್ ಪಾರ್ಟನರ್ಶಿಪ್ ಕೌನ್ಸಿಲ್(ಎಸ್ಪಿಸಿ) ಮೊದಲ ಸಭೆ ನಡೆಯಲಿದೆ. 2019ರಲ್ಲಿ ರಿಯಾದ್ಗೆ ಭೇಟಿ ನೀಡಿದಾಗ ಎಸ್ಪಿಸಿಯನ್ನು ರೂಪಿಸಲಾಗಿತ್ತು.
ಈ ಹಿಂದೆ ರಾಷ್ಟ್ರಪತಿ ಭವನಕ್ಕೆ ಬಂದ ಸೌದಿ ರಾಜಕುಮಾರನಿಗೆ ಶಿಷ್ಟಾಚಾರದಂತೆ ಸ್ವಾಗತ ನೀಡಲಾಗಿತ್ತು. ರಾಷ್ಟ್ರಪತಿ ಮುರ್ಮು ಪ್ರಧಾನಿ ಅವರನ್ನು ಸ್ವಾಗತಿಸಿದ್ದು ಜಿ20 ಶೃಂಗದಲ್ಲಿ ಭಾಗವಹಿಸಲು ಅವರು ಶನಿವಾರ ಹೊಸದಿಲ್ಲಿಗೆ ಬಂದಿದ್ದರು.
ಯಶಸ್ವಿಯಾಗಿ ಅಧ್ಯಕ್ಷತೆಯ ಸ್ಥಾನ ನಿರ್ವಹಿಸಿದ್ದಕ್ಕಾಗಿ ರಾಜಕುಮಾರ್ ಮುಹಮ್ಮದ್ ಭಾರತವನ್ನು ಅಭಿನಂದಿಸಿದರು. ಎರಡು ದೇಶಗಳ ಭವಿಷ್ಯಕ್ಕಾಗಿ ಕೆಲಸ ಮಾಡುವುದಾಗಿ ಸೌದಿ ರಾಜಕುಮಾರ ಹೇಳಿಕೆ ನೀಡಿದ್ದಾರೆ.












