ಔರಾದ್: ನೀರಿನ ಸಮಸ್ಯೆ; ಕಲುಷಿತ ನೀರು ಸೇವನೆಯಿಂದ 15 ಮಂದಿ ಅಸ್ವಸ್ಥ

0
295

ಸನ್ಮಾರ್ಗ ವಾರ್ತೆ

ಔರಾದ್ (ಬೀದರ್ ಜಿಲ್ಲೆ): ಕಲುಷಿತ ನೀರು ಸೇವಿಸಿ 15 ಮಂದಿ ಅಸ್ವಸ್ಥಗೊಂಡಿದ್ದಾರೆ. ಇದರಲ್ಲಿ ಮೂವರು ಮಕ್ಕಳಿದ್ದಾರೆ.

ತಾಲ್ಲೂಕಿನ ಕರಕ್ಕಾಳ ಗ್ರಾಮದ ಕಾರ್ತಿಕ ತಾತ್ಯಾರಾವ್ (8), ದಿವ್ಯ ತಾತ್ಯಾರಾವ್ (6), ಸಾಕ್ಷಿ ಕಿಶನರಾವ್ (7) ಮಹಾದೇವ ಬಾಬುರಾವ್, ಮಹಾದೇವಿ ಗುರುನಾಥ, ಲಲಿತಾ ಬಾಯಿ ಮಾಧವರಾವ್, ಮೋನಿಕಾ ತಾತ್ಯಾರಾವ್, ಭಾಗೀರಥಿಬಾಯಿ ವೈಜಿನಾಥ, ಕೇವಳಾ ಬಾಯಿ, ಮಹಾದೇವರಾವ್ ಸಿಂಧೆ, ಅನೀಲ ಸಿಂಧೆ, ಶಿವಾಜಿ ನರಸಿಂಗ ಅವರು ವಾಂತಿಬೇಧಿಯಿಂದ ಇಲ್ಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಕಿತ್ಸೆ ಪಡೆಯುತ್ತಿರುವ ಕರಕ್ಕಾಳ ಗ್ರಾಮಸ್ಥರು ವಾಂತಿಭೇದಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಕಲುಷಿತ ನೀರು ಸೇವನೆಯಿಂದ ಹೀಗಾಗಿರುವ ಸಾದ್ಯತೆ ಇದೆ ಎಂದು ಇಲ್ಲಿಯ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಮಣ ಪೋಕಲವಾರ ತಿಳಿಸಿದ್ದಾರೆ.

ನೀರಿನ ಕೊರತೆಯಾಗಿ ಕೆರೆಯಲ್ಲಿನ ಬಾವಿಯಿಂದ ನೀರು ಪೂರೈಸಲಾಗಿದೆ. ಇದೆ ಕಾರಣದಿಂದ ನಮ್ಮ ಊರಿನ ಜನರಿಗೆ ಈ ರೀತಿಯ ಸಮಸ್ಯೆಯಾಗಿದೆ ಎಂದು ಕರಕ್ಕಾಳ ಗ್ರಾಮಸ್ಥರು ಹೇಳಿದ್ದಾರೆ.