ಅಕ್ರಮ ಆರೋಪ: ಅಸ್ಸಾಂ ಸರಕಾರದಿಂದ ಮದ್ರಸಾ ಧ್ವಂಸ

0
302

ಸನ್ಮಾರ್ಗ ವಾರ್ತೆ

ಅಸ್ಸಾಮ್‌ನ ಬಿರ್ ಲಜಿತ್ ಸೇನಾ ಎಂಬ ಸಂಘಟನೆಯು ಪ್ರತಿಭಟನೆ ನಡೆಸಿದ ಬಳಿಕ ಜೊರ್ ಹತ್ ಜಿಲ್ಲೆಯ ಜಿಲ್ಲಾ ಆಡಳಿತವು ಮದರಸವನ್ನು ಮತ್ತು ಅದಕ್ಕೆ ಕಟ್ಟಲಾದ ಕಾಂಪೌಂಡನ್ನು ಧ್ವಂಸ. ಈ ಮದ್ರಸ ಮತ್ತು ಇದರ ಕಾಂಪೌಂಡ್ ಕಾನೂನುಬಾಹಿರವಾಗಿ ಕಟ್ಟಲಾಗಿದೆ ಎಂದು ಈ ಸಂಘಟನೆ ಆರೋಪಿಸಿತ್ತು.

ವಲಸೆ ವಿರೋಧಿ ಹೋರಾಟಕ್ಕಾಗಿ ಗುರುತಿಸಿಕೊಂಡಿರುವ ಈ ಸಂಘಟನೆಯು ದಾಖಲೆಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಅಕ್ರಮವಾಗಿ ಮದರಸವನ್ನು ಕಟ್ಟಲಾಗಿದೆ ಎಂದು ತೀರ್ಮಾನಿಸಿ , ದ್ವಂಸಗೊಳಿಸಿದ್ದಾರೆ.

ಈ ಬೆಳವಣಿಗೆಯನ್ನು ಬಿರ್ ಲಚಿತ್ ಸೇನಾ ಸಂಘಟನೆಯು ಸಂಭ್ರಮಿಸಿದೆ. ಮಾತ್ರ ಅಲ್ಲ ಅಸ್ಸಾಂನ ವಿವಿಧ ಭಾಗಗಳಲ್ಲಿ ಹೀಗೆ ಅಕ್ರಮವಾಗಿ ಕಟ್ಟಲಾಗಿರುವ ಮದರಸ ಮಸೀದಿಗಳ ವಿರುದ್ಧ ಚಳವಳಿ ಮುಂದುವರಿಸುವುದಾಗಿ ಹೇಳಿದೆ.

ಈ ಮದ್ರಸವು ಸ್ಥಳೀಯ ಜನರ ಪಾಲಿಗೆ ಶಿಕ್ಷಣ ಕೇಂದ್ರವಾಗಿತ್ತು ಮತ್ತು ಹಲವು ವರ್ಷಗಳಿಂದ ಇದು ಚಾಲ್ತಿಯಲ್ಲಿ ಇತ್ತು ಎಂದು ಮುಸ್ಲಿಂ ಸಮುದಾಯದ ನಾಯಕರು ಹೇಳಿದ್ದಾರೆ.