ಬಿ.ಸಿ.ರೋಡ್ ನಲ್ಲಿ ಯುವಕನಿಗೆ ಚೂರಿ ಇರಿತ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

0
965

ಸನ್ಮಾರ್ಗ ವಾರ್ತೆ

ಬಂಟ್ವಾಳ: ತಾಲೂಕಿನ ಬಿ. ಸಿ. ರೋಡ್ ಸಮೀಪದ ಅಜ್ಜಿಬೆಟ್ಟು ಎಂಬಲ್ಲಿ ಯುವಕನೋರ್ವನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಿ. ಸಿ. ರೋಡ್-ಕೈಕಂಬ ಸಮೀಪದ ಪರ್ಲಿಯಾ ಎಂಬಲ್ಲಿನ ನಿವಾಸಿಗಳಾದ ಸಫ್ ವಾನ್ ಹಾಗೂ ಆತನ ಸ್ನೇಹಿತ ಇಮ್ರಾನ್ ಎಂಬವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬ್ರಹ್ಮರಕೂಟ್ಲು ನಿವಾಸಿ ಮನೋಜ್ ಸಫಲ್ಯ ಎಂಬಾತನಿಗೆ ಏಪ್ರಿಲ್ 4ರಂದು ಬಿ. ಸಿ. ರೋಡ್ ಬಳಿಯ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ಬಂದ ಇಬ್ಬರು ಸ್ಕೂಟರ್ ನಲ್ಲಿ ಬಂದು ಚೂರಿಯಿಂದ ಇರಿದು ಪರಾರಿಯಾಗಿದ್ದರು. ಚೂರಿ ಇರಿದ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಮೂರು ತಂಡಗಳನ್ನು ರಚಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಸಂದರ್ಭದಲ್ಲಿ ಈ ಹಲ್ಲೆ ಘಟನೆಯ ಹಿಂದೆ ಮನೋಜ್ ಸಫಲ್ಯರವರ ಸಹೋದರನ ಕೈವಾಡದಿಂದ ಈ ಹಲ್ಲೆ ನಡೆದಿತ್ತೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಬಂಟ್ವಾಳ ಡಿ ವೈ ಎಸ್ ಪಿ ವೆಲೆಂಟೈನ್ ಡಿಸೋಜ ನೇತೃತ್ವದ ತಂಡ ಸಫಲವಾಗಿದೆ.