ಬಾಲಕೋಟ್ ಪ್ರಭಾವ; ಎನ್‍ಡಿಎಗೆ 283 ಸೀಟುಗಳು- ಸಮೀಕ್ಷೆ

0
772

ಹೊಸದಿಲ್ಲಿ, ಮಾ.19: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮುಂದಾಳುತ್ವದ ಎನ್‍ಡಿಎ 283 ಸೀಟುಗಳನ್ನು ಗಳಿಸಿ ಅಧಿಕಾರಕ್ಕೆ ಮರಲಲಿದೆ ಎಂದು ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ನೇತೃತ್ವದ ಯುಪಿಎಗೆ 135 ಸೀಟು ಮತ್ತು ಉಳಿದ ಪಕ್ಷಗಳಿಗೆ 125 ಸೀಟು ಸಿಗಲಿದೆ ಎಂದು ಸಮೀಕ್ಷೆ ಹೇಳಿದೆ. ಒಟ್ಟು 543 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಪಾಕಿಸ್ತಾನದ ಬಾಲಕೋಟಿನಲ್ಲಿ ನಡೆದ ವಾಯು ದಾಳಿಯು ದೇಶದಲ್ಲಿ ಎನ್‍ಡಿಎಗೆ ಅನುಕೂಲಕರವಾದ ಪರಿಸ್ಥಿತಿ ಸೃಷ್ಟಿಸಿತು ಎಂದು ಸಮೀಕ್ಷೆ ತಿಳಿಸಿದೆ.

ಕೇರಳದಲ್ಲಿ ಯುಡಿಎಫ್‍ಗೆ 16 ಸ್ಥಾನಗಳು, ಎಲ್‍ಡಿಎಫ್‍ಗೆ ಮೂರು ಸೀಟು ಮತ್ತು ಎನ್‍ಡಿಎಗೆ ಒಂದು ಸೀಟು ಸಿಗಲಿದೆ.

ಜನವರಿಯಲ್ಲಿ ಲೋಕಸಭಾ ಚುನಾವಣೆ ನಡೆದಿದ್ದರೆ ಎನ್‍ಡಿಎಗೆ ಈಗಿಗಿಂತ ಇಪ್ಪತ್ತೊಂದು ಸೀಟು ಕಡಿಮೆ ದೊರಕುತ್ತಿತ್ತು. ನಂತರದ ಘಟನಾವಳಿಗಳು ಎನ್‍ಡಿಎ ಜನಪ್ರಿಯತೆಯನ್ನು ಹೆಚ್ಚಿಸಿದೆ. ಮಧ್ಯಕಾಲೀನ ಬಜೆಟ್ ಮತ್ತು ಬಾಲಕೋಟ್ ವಾಯುದಾಳಿ ಇದಕ್ಕೆ ಕಾರಣವೆಂದು ಸಮೀಕ್ಷೆ ಹೇಳುತ್ತಿದೆ.

ಉತ್ತರಪ್ರದೇಶದಲ್ಲಿ ಎರಡು ಸೀಟುಗಳು ಮಾತ್ರ ಕಾಂಗ್ರೆಸ್‍ಗೆ ಸಿಗಲಿದೆ. ಎನ್‍ಡಿಎಗೆ 42, ಎಸ್ಪಿ, ಬಿಎಸ್ಪಿಗೆ 36 ಸೀಟುಗಳು ಸಿಗಲಿದೆ. ದಿಲ್ಲಿಯ ಏಳು ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ.
ಪಂಜಾಬಿನಲ್ಲಿ ಹನ್ನೆರಡು ಸ್ಥಾನ ಕಾಂಗ್ರೆಸ್ಸಿಗೆ ಸಿಗಲಿದ್ದು ಬಿಜೆಪಿಗೆ ಪ್ರಯೋಜನವಾಗದು. ಉಳಿದ ಒಂದು ಸೀಟು ಎಎಪಿ ಪಾಲಾಗಲಿದೆ. ಮಧ್ಯಪ್ರದೇಶದಲ್ಲಿ ಕಳೆದ ವರ್ಷಕ್ಕಿಂತ ಬಿಜೆಪಿಗೆ ಐದು ಸೀಟು ಕಡಿಮೆ ಸಿಗಲಿದೆ. ಬಿಜೆಪಿಗೆ ಇಲ್ಲಿ 22 ಸೀಟು ಸಿಕ್ಕಿದರೆ, ಕಾಂಗ್ರೆಸ್‍ಗೆ ಏಳು ಸೀಟುಗಳು ಸಿಗಲಿದೆ.

ಪಶ್ಚಿಮಬಂಗಾಳದಲ್ಲಿ ಎಡ ಪಕ್ಷ ಮತ್ತು ಯುಪಿಎಗೆ ಒಂದೇ ಒಂದು ಸ್ಥಾನ ಸಿಗಲಾರದು. ತೃಣಮೂಲ ಕಾಂಗ್ರೆಸ್‍ಗೆ 31 ಸೀಟು, ಎನ್‍ಡಿಗೆ 11 ಸೀಟುಗಳು ಸಿಗಲಿದೆ. ತಮಿ ಳ್ನಾಡಿನಲ್ಲಿ ಕಾಂಗ್ರೆಸ್ ಮಿತ್ರ ಪಕ್ಷ 34 ಸೀಟುಗಳನ್ನು ಮತ್ತು ಬಿಜೆಪಿ ಐದು ಸೀಟುಗಳನ್ನು ಗಳಿಸಲಿದೆ. ಈ ತಿಂಗಳು ನಡೆಸಲಾದ ಸಮೀಕ್ಷೆಯಲ್ಲಿ 16,931 ಜನರು ಭಾಗವಹಿಸಿದ್ದರು.