ಪಾಕಿಸ್ತಾನಿಯೆಂದು ಹೇಳಿ ಕೇರಳದ ವ್ಯಕ್ತಿಯ ವಿರುದ್ಧ ಸಂಘಪರಿವಾರ ಪ್ರತಿಭಟನೆ: ಅಂಗಡಿ ಮುಚ್ಚಿಸಿದ ಪ್ರತಿಭಟನಾಕಾರರು

0
975

ಸನ್ಮಾರ್ಗ ವಾರ್ತೆ-
ಬೆಂಗಳೂರು, ಜ. 6: ಪಾಕಿಸ್ತಾನದವನೆಂದು ಆರೋಪಿಸಿ ಕೇರಳದ ವ್ಯಾಪಾರಿ ಮತ್ತು ಮುಸ್ಲಿಂ ಲೀಗ್ ಕಾರ್ಯಕರ್ತ ಯುವಕನ ವಿರುದ್ಧ ಸಂಘಪರಿವಾರದ ಕಾರ್ಯಕರ್ತರು ರಾಮಮನಗರ ಬಿಡದಿಯಲ್ಲಿ ಪ್ರತಿಭಟನೆ ನಡೆಸಿದರು. ಕೇರಳದ ಕಣ್ಣೂರಿನ ಮುಹಮ್ಮದ ಅಫ್ಝಲ್ ಪಾರಂಙಳ್(32)ರನ್ನು ಬಂಧಿಸಬೇಕೆಂದು ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರು ರವಿವಾರ ಬಿಡದಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಅಫ್ಝಲ್‍ರ ಮಾಲಕತ್ವದ ಅಂಗಡಿಯನ್ನು ಬಲವಂತದಿಂದ ಬಂದ್ ಮಾಡಿಸಲಾಗಿದೆ. ಅಂಗಡಿಯಲ್ಲಿದ್ದ ಸಹೋದರ ಅಜ್ಮಲ್(23)ಗೆ ಹೊಡೆದು ಸಿಬ್ಬಂದಿಗೆ ಜೀವ ಬೆದರಿಕೆ ಹಾಕಲಾಗಿದೆ. ಎಲ್ಲರನ್ನೂ ಪಾಕಿಸ್ತಾನಕ್ಕೆ ಕಳುಹಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಮುಸ್ಲಿಂ ಲೀಗ್ ನ ಧ್ವಜದೊಂದಿಗೆ ಅಫ್ಝಲ್‍ರ ಚಿತ್ರ ಫೇಸ್‍ಬುಕ್ ಪೋಸ್ಟ್ ಗಳಲ್ಲಿ ಮತ್ತು ಅರೆಸ್ಸೆಸ್‍ನ ಮಾಗಡಿ ಫೇಸ್‍ಬುಕ್‍ನಲ್ಲಿ ಪ್ರತ್ಯಕ್ಷವಾದುದು ಸಮಸ್ಯೆ ಹುಟ್ಟುಹಾಕಿತ್ತು. ಈತ ಪಾಕಿಸ್ತಾನಿ, ಕೇರಳದ ಮುಸ್ಲಿಂ ಎಂದು ಹೇಳಿ ಮಾಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾನೆ ಎಂದು ಫೇಸ್ಬುಕ್‍ನಲ್ಲಿ ಆರೋಪಿಸಲಾಗಿತ್ತು. ಪೋಸ್ಟ್ ತ್ವರಿತ ವೈರಲ್ ಆಗಿದ್ದುದರಿಂದ ಅಫ್ಝಲ್ ರವಿವಾರ ಬೆಳಗ್ಗೆ ಬಿಡದಿ ಪೊಲೀಸ್ ಠಾಣೆಗೆ ಹೋಗಿ ಎಸ್‍ ಐ ಭಾಸ್ಕರ್ ಗೆ ದೂರು ನೀಡಿದ್ದರು.

ಮುಸ್ಲಿಂ ಲೀಗ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮತ್ತು ಕೆಎಂಸಿಸಿ ಮೈಸೂರ್ ರೋಡ್-ಬಿಡದಿ ಏರಿಯಾ ಉಪಾಧ್ಯಕ್ಷರಾಗಿದ್ದಾರೆ ಅಫ್ಝಲ್. ಜೊತೆಗೆ ಅಫ್ಝಲ್ ಸಾಮಾಜಿಕ ಕಾರ್ಯಕರ್ತರು. ಮೂವತ್ತೈದು ವರ್ಷ ಮೊದಲು ವ್ಯಾಪಾರಕ್ಕಾಗಿ ಬಿಡದಿಗೆ ಅಫ್ಝಲ್‍ರ ತಂದೆ ಬಂದಿದ್ದರು. ಬೆಂಗಳೂರು-ಮೈಸೂರು ಹೈವೆಯಲ್ಲಿರುವ ಬಿಡದಿ ನಗರದಲ್ಲಿ ಇವರಿಗೆ ಹನ್ನೆರಡು ಅಂಗಡಿಗಳಿವೆ. ರವಿವಾರ ನೂರಕ್ಕೂ ಹೆಚ್ಚು ಸಂಘಪರಿವಾರದ ಕಾರ್ಯಕರ್ತರು ಜೈಶ್ರೀರಾಂ ಕೂಗುತ್ತಾ ಪ್ರತಿಭಟನೆ ಮಾಡುತ್ತ ಬಂದರು. ಇವರ ಎಲ್ಲ ಅಂಗಡಿಗಳನ್ನು ಮುಚ್ಚಿಸಿದ ಬಳಿಕ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಸಾಮಾಜಿಕ ಕಾರ್ಯಕರ್ತನಾಗಿದ್ದುದಲ್ಲದೆ ಕೇರಳೀಯರ ಹಲವು ವಿಷಯಗಳಲ್ಲಿ ಪೊಲೀಸ್ ಠಾಣೆಯ ಸಂಪರ್ಕದಲ್ಲಿದ್ದುದರಿಂದ ಅಫ್ಝಲ್ ಎಸ್ಸೈಗೆ ಪರಿಚಿತರಾಗಿದ್ದರು. ಅಫ್ಝಲ್‍ರನ್ನು ಬಂಧಿಸಬೇಕೆಂದು ಬಿಜೆಪಿ ಬಿಡದಿ ಸಮಿತಿ ನೀಡಿದ ದೂರನ್ನು ಸ್ವೀಕರಿಸಿದ ಎಸ್ಸೈ ಹೊರಟು ಹೋಗದಿದ್ದರೆ ಲಾಠಿ ಚಾರ್ಜು ಮಾಡಬೇಕಾದೀತೆಂದು ಮುನ್ನೆಚ್ಚರಿಕೆ ನೀಡಿ ಪ್ರತಿಭಟನಾಕಾರರನ್ನು ಹೊರಟು ಹೋಗುವಂತೆ ಮಾಡಿದ್ದಾರೆ.