ಸನ್ಮಾರ್ಗ ವಾರ್ತೆ
ಚಿತ್ಗಾಂಗ್,ಡಿ.28: ಸಮುದ್ರ ಮತ್ತು ರಕ್ಷಸರ ನಡುವೆ ಸಿಲುಕಿಕೊಂಡಿರುವ ಜನರಿದ್ದರೆ ಅವರು ರೋಹಿಂಗ್ಯನ ಜನರು. ಈಗ ಅವರ ಮುಂದಿರುವುದು ಸಮುದ್ರ. ಮತ್ತು ಅದು ಯಾವಾಗ ಬೇಕಾದರೂ ಕೆರಳಿ ಪ್ರಳಯ ಸಂಭವಿಸಬಹುದಾದ ಬಂಗಾಳ ಕೊಲ್ಲಿಯ 20 ವರ್ಷ ಹಿಂದೆ ರೂಪುಗೊಂಡ ಭಾಸಾನ್ ಚಾರ್ ದ್ವೀಪವಾಗಿದೆ. ಪಶ್ಚಿಮಬಂಗಾಳದ ಕಾಕ್ಸ್ ಬಝಾರ್ ನಿರಾಶ್ರಿತರ ಶಿಬಿರ ಈಗ ತುಂಬಿ ತುಳುಕಿದೆ. ಇನ್ನೂ ಅಲ್ಲಿ ನಿರಾಶ್ರಿತರನ್ನು ಇರಿಸಿಕೊಳ್ಳುವಂತಿಲ್ಲ. ಆದ್ದರಿಂದ ಅಲ್ಲಿಂದ 1600 ಮಂದಿ ರೋಹಿಂಗ್ಯನ್ ಭಸಾನ್ ಚಾರ್ ದ್ವೀಪಕ್ಕೆ ಕಳೆದ ವಾರ ಸ್ಥಳಾಂತರಿಸಲಾಗಿದೆ. ಈಗ 1000 ಮಂದಿಯ ಇನ್ನೊಂದು ತಂಡ ಅಲ್ಲಿಗೆ ಹೊರಟು ನಿಂತಿದೆ. ಕಾಕ್ಸ್ ಬಝಾರ್ನಿಂದ ಚಿತ್ತಗಾಂವ್ಗೆ ಬಂದು ಅಲ್ಲಿಂದ ಭಸಾನ್ ಚಾರ್ ದ್ವೀಪಕ್ಕೆ ಹೋಗಲಿದ್ದಾರೆ.
ಓಲಾಡುವ ಸಮುದ್ರದಲ್ಲಿ ಸಣ್ಣ ಹಡಗಿನಲ್ಲಿ ತುಂಬಿಸಿಕೊಂಡು ಬರುತ್ತಿರುವ ನಿರೀಕ್ಷೆಯನ್ನೇ ಕಳಕೊಂಡ ಜನವಿಭಾಗ ಅದು. ದ್ವೀಪಕ್ಕೆ ಹೋಗಲು ಯಾರೂ ಒತ್ತಾಯಿಸಿಲ್ಲ. ಅವರು ಬಯಸಿದರೆ ಮಾತ್ರ ಹೋದರೆ ಸಾಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ದ್ವೀಪಕ್ಕೆ ಹೋಗಲು ತಮ್ಮನ್ನು ಒತ್ತಾಯಿಸಲಾಗುತ್ತಿದೆ ಎಂದು ನಿರಾಶ್ರಿತರು ತಿಳಿಸಿದ್ದಾರೆ ಎಂದು ಅಲ್ ಜಝೀರ ವರದಿ ಮಾಡಿದೆ.
20 ವರ್ಷಗಳ ಹಿಂದೆ ಬಂಗಾಳ ಕೊಲ್ಲಿಯಲ್ಲಿ ಉದ್ಭವಿಸಿದ ದೀಪ ಭಾಸನ್ ಚಾರ್ ಆಗಿದ್ದು ಯಾವ ಕ್ಷಣವೂ ಇದು ಸಮುದ್ರಪಾಲಾಗಬಹುದು ಎಂಬ ಶಂಕೆಯಿದೆ. ಆದರೆ, ಮ್ಯಾನ್ಮಾರಿನ ಭಯೋತ್ಪಾದನೆಯಲ್ಲಿ ಜೀವಕಳಕೊಂಡರವರನ್ನು ನೆನೆಯುವಾಗ ಇದುವೇ ಅವರಿಗೆ ಸಮಧಾನದ ವಿಷಯವೂ ಆಗಿದೆ. ಹುಟ್ಟಿದ ಭೂಮಿಗೆ ಮರಳಿ ಹೋಗುವ ಕೆಲವು ಪ್ರಕ್ರಿಯೆಗಳು ವಿಫಲವಾದ ನೆನೆಪು ಅವರಲ್ಲಿದೆ. ಮರಳಿದರೆ ಎದುರಿಸಬೇಕಾದ ಸ್ಥಿತಿಗೆ ಹೆದರಿ ಹಿಂಜರಿಯುತ್ತಿರುವ ಜನವಿಭಾಗ ಇವರದು.












