ಯುಪಿಎ ಅಧ್ಯಕ್ಷನಾಗಲಾರೆ: ಊಹಾಪೋಹಗಳಿಗೆ ತೆರೆ ಎಳೆದ ಶರದ್ ಪವಾರ್

0
450

ಸನ್ಮಾರ್ಗ ವಾರ್ತೆ

ಮುಂಬೈ,ಡಿ.28: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯಿಂದ ಯುಪಿಎ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದ್ದಾರೆ ಎಂದು ವದಂತಿಯನ್ನು ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ನಿರಾಕರಿಸಿದ್ದು ರೈತ ಹೋರಾಟದ ವೇಳೆ ಪವಾರ್‌ರವರು ದಿಲ್ಲಿಯಲ್ಲಿ ಪ್ರತಿಪಕ್ಷ ನಾಯಕರನ್ನು ಭೇಟಿಯಾಗಲಿರುವ ವೇಳೆ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ.

ಬಿಜೆಪಿಯ ವಿರುದ್ಧ ಶಕ್ತಿಶಾಲಿ ಪರ್ಯಾಯವಾಗಬೇಕಿದ್ದರೆ ಪ್ರತಿಪಕ್ಷ ಪಾರ್ಟಿಗಳು ಯುಪಿಎಯಲ್ಲಿ ಒಗ್ಗೂಡಿರಬೇಕೆಂದು ಶರದ್ ಪವಾರ್ ಎಲ್ಲರಿಗೂ ಸ್ವೀಕಾರಾರ್ಹ ನಾಯಕ ಎಂದು ಶಿವಸೇನೆ ಮುಖವಾಣಿ ಸಾಮ್ನಾ ಸಂಪಾದಕೀಯ ಬರೆದಿತ್ತು. ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ಪಾತ್ರ ನಿಭಾಯಿಸಲು ಪವಾರ್ ಸಮರ್ಥರು ರಾಜಕೀಯದಲ್ಲಿ ಯಾವ ಅದ್ಭುತವೂ ನಡೆಯಬಹುದು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿಕೆ ನೀಡಿದ್ದಾರೆ.

ಅದರೆ, ಯುಪಿಎ ಅಧ್ಯಕ್ಷನಾಗಲು ನನಗೆ ಸಮಯ, ಆಸಕ್ತಿ ಇಲ್ಲ ಎಂದು ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಪವಾರ್‌ರವರೇ ಹೇಳಿದರು. ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿ ಯುಪಿಎ ಘಟಕ ಪಕ್ಷಗಳ ನಡುವೆ ನಡೆದಿಲ್ಲ ಎಂದು ಎನ್‍ಸಿಪಿ ವಕ್ತಾರ ಮಹೇಶ್ ತಾಪಸೆ ಹೇಳಿದ್ದಾರೆ.