ಬಿಬಿಸಿ ನ್ಯೂಸ್ ಚಾನೆಲ್ ವಿಶ್ವಾಸಾರ್ಹ ಎಂದಿದ್ದರಾ ಮೋದಿ?

0
418

ಸನ್ಮಾರ್ಗ ವಾರ್ತೆ 

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರು ಬಿಬಿಸಿ ನ್ಯೂಸ್ ಚಾನೆಲ್ ಅನ್ನು ಹೊಗಳಿದ್ದ ಹಳೆಯ ವಿಡಿಯೊ ವೈರಲ್ ಆಗುತ್ತಿದೆ. ಜನರು ದೂರದರ್ಶನವನ್ನು ನಂಬದಿದ್ದರೂ ಬಿಬಿಸಿಯನ್ನು ನಂಬುತ್ತಾರೆಂದು ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿರುವ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಆಲ್ಟ್ ನ್ಯೂಸ್  ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗುಜರಾತ್ ಗಲಭೆ ಕುರಿತು ಬಿಬಿಸಿ ಮಾಡಿರುವ ಸಾಕ್ಷ್ಯ ಚಿತ್ರವನ್ನು ಭಾರತದಲ್ಲಿ ಸರ್ಕಾರ ನಿರ್ಬಂಧಿಸಿರುವ ಬೆನ್ನಲ್ಲೇ, ‘ಬಿಬಿಸಿಯನ್ನು ಮೋದಿಯವರು ಹೊಗಳಿದ್ದ ವಿಡಿಯೊ’ ಮುನ್ನೆಲೆಗೆ ಬಂದಿದೆ. 2013 ರಲ್ಲಿ ಮೋದಿಯವರು ಬಿಬಿಸಿಯನ್ನು ಹೊಗಳಿ ಮಾತನಾಡಿದ್ದರು. ಮಾಧ್ಯಮವೊಂದರ ವಿಶ್ವಾಸಾರ್ಹತೆಗೆ ದೇಶದ ನಾಯಕನೊಬ್ಬ ಸಲ್ಲಿಸಿದ ಮಹೋನ್ನತ ಗೌರವ ಇದಾಗಿದೆ ಎಂದೇ ಬಣ್ಣಿಸಲಾಗುತ್ತಿದೆ.

“ಸಾಮಾನ್ಯ ಜನರು ಏನು ಮಾತನಾಡುತ್ತಾರೆ? ಇದನ್ನು  ನಾನು ಬಿಬಿಸಿಯಲ್ಲಿ ಕೇಳಿದ್ದೇನೆ ಎನ್ನುತ್ತಾರೆ. ನಮ್ಮ ದೇಶದ ಆಲ್ ಇಂಡಿಯಾ ರೇಡಿಯೋವನ್ನು ಅವರು ನಂಬುವುದಿಲ್ಲ, ದೂರದರ್ಶನವನ್ನು ಅವರು ನಂಬುವುದಿಲ್ಲ, ಅವರು ಪತ್ರಿಕೆಯನ್ನು ನಂಬುವುದಿಲ್ಲ. ನಾನು ಬಿಬಿಸಿಯಲ್ಲಿ ಕೇಳಿದ್ದೇನೆ ಎನ್ನುತ್ತಾರೆ” ಎನ್ನುವ ಮೋದಿಯವರು “ಈ ರೀತಿಯ ವಿಶ್ವಾಸಾರ್ಹತೆ ಇರಬೇಕು” ಎಂಬ ಅಭಿಪ್ರಾಯ ತಾಳುತ್ತಾರೆ.