ಸೌದಿ: ಎಲ್ಲೆಲ್ಲೋ ಕಸ ಎಸೆಯಬೇಡಿ ದಂಡ ಖಚಿತ

0
198

 ಸನ್ಮಾರ್ಗ ವಾರ್ತೆ

ರಿಯಾದ್ : ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಸೌದಿ ಅರೇಬಿಯಾ ಗರಂ ಆಗಿದೆ. ಸಿಗರೇಟ್ ಸೇದಿ ಅದರ ಅನುಪಯುಕ್ತ ತುಂಡನ್ನು ಬೀದಿಗೆಸೆದ ಪಾಕಿಸ್ತಾನಿಗೆ ಸಾವಿರ ರಿಯಾಲ್ ಅಥವಾ ಸುಮಾರು 20 ಸಾವಿರ ರೂಪಾಯಿ ದಂಡ ವಿಧಿಸುವ ಮೂಲಕ ಸೌದಿ ಅರೇಬಿಯಾ ಕಠಿಣ ಎಚ್ಚರಿಕೆ ನೀಡಿದೆ. ಈ ಹಿಂದೆ ಕೂಡಾ ಈತ ಇಂಥದ್ದೇ ಅಪರಾಧ ಮಾಡಿದ್ದು ಆತನಿಗೆ 500 ರಿಯಾಲ್ ದಂಡ ವಿಧಿಸಲಾಗಿತ್ತು.

ಇದೇ ವೇಳೆ ಅಂಗಡಿಯಿಂದ ಖರ್ಜೂರವನ್ನು ಖರೀದಿಸಿದ ಕೇರಳದ ವ್ಯಕ್ತಿಯೊಬ್ಬ ಅದರ ಸಿಪ್ಪೆಯನ್ನು ಬೀದಿಗೆ ಎಸೆದ ಕಾರಣಕ್ಕಾಗಿ ಆತನಿಗೆ 500 ರಿಯಲ್ ದಂಡ ವಿಧಿಸಿದ ಘಟನೆಯೂ ನಡೆದಿದೆ. ನಡೆಯುವಾಗ ಅಥವಾ ಅಪಾರ್ಟ್ ಮೆಂಟ್ ನಿಂದ ಅಥವಾ ವಾಹನಗಳಲ್ಲಿ ಹೋಗುವಾಗ ಅಥವಾ ಇನ್ನಾವುದಾದರೂ ರೂಪದಲ್ಲಿ ಕಸ ಅಥವಾ ಮಾಲಿನ್ಯವನ್ನು ಎಸೆದರೆ ಮೊದಲು 200 ರಿಯಾಲ್ ದಂಡ, ಆ ಬಳಿಕ ಸಾವಿರ ರಿಯಾಲ್ ದಂಡ ವಿಧಿಸಲಾಗುವುದು ಎಂದು ಸೌದಿ ಅರೇಬಿಯಾ ಎಚ್ಚರಿಕೆ ನೀಡಿದೆ. ಮಾಲಿನ್ಯವನ್ನು ಎಸೆಯುವುದಕ್ಕೆ  ಹಾಕಲಾಗಿರುವ ಬುಟ್ಟಿಗಳಿಗೆ  ಎಸೆಯಬೇಕು ಮತ್ತು ಹೊರಗಡೆಗೆ ಕಾಣದಂತೆ ಅವನ್ನು ಅಲ್ಲಿ ಇರಿಸಬೇಕು. ಒಂದು ವೇಳೆ ಎಲ್ಲೆಂದರಲ್ಲಿ ಎಸೆದರೆ ಸಾವಿರದಿಂದ ಹತ್ತು ಸಾವಿರ ರಿಯಾಲ್ ದಂಡ ವಿಧಿಸುವುದಾಗಿ ಸೌದಿ ಎಚ್ಚರಿಕೆ ನೀಡಿದೆ.