ಪ. ಬಂಗಾಳ: ಸುವೆಂದು ಅಧಿಕಾರಿಯ ತಂದೆ, ಸಹೋದರನಿಗೆ ವೈ ಪ್ಲಸ್ ಭದ್ರತೆ ನೀಡಿದ ಕೇಂದ್ರ

0
357

ಸನ್ಮಾರ್ಗ ವಾರ್ತೆ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೊಸದಾಗಿ ಚುನಾಯಿತರಾದ ಎಲ್ಲಾ 77 ಬಿಜೆಪಿ ಶಾಸಕರಿಗೆ ಕೇಂದ್ರ ಭದ್ರತಾ ರಕ್ಷಣೆ ಒದಗಿಸಿದ ಕೆಲ ದಿನಗಳ ನಂತರ ಕೇಂದ್ರ ಗೃಹ ಸಚಿವಾಲಯವು ಲೋಕಸಭಾ ಸಂಸದರಾದ ಸಿಸಿರ್ ಕುಮಾರ್ ಅಧಿಕಾರಿ ಮತ್ತು ದಿವ್ಯೆಂದು ಅಧಿಕಾರಿಗೆ ಸೌಲಭ್ಯವನ್ನು ವಿಸ್ತರಿಸಿದ ಬಳಿಕ ಸುವೆಂಡು ಅಧಿಕಾರಿಯ ತಂದೆ ಮತ್ತು ಕಿರಿಯ ಸಹೋದರನಿಗೆ ವೈ ಪ್ಲಸ್ ಭದ್ರತೆ ನೀಡಿದ್ದು, ಸದ್ಯ ವಿವಾದಕ್ಕೆ ಆಸ್ಪದ ನೀಡಿದೆ.

ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಡಿಯಲ್ಲಿ ವೈ ಪ್ಲಸ್ ಭದ್ರತೆ ಒದಗಿಸಲಾಗಿದ್ದು, ವೈಯಕ್ತಿಕ ಭದ್ರತಾ ಅಧಿಕಾರಿ ಮತ್ತು ಕಮಾಂಡೋಗಳು ಸೇರಿದಂತೆ 11 ಸಶಸ್ತ್ರ ಪೊಲೀಸರು ಇರಲಿದ್ದಾರೆ. ಸಿಸಿರ್ ಕುಮಾರ್ ಅಧಿಕಾರಿಯವರು ತೃಣಮೂಲ ಕಾಂಗ್ರೆಸ್ ನ ಸಂಸದರಾಗಿ ಆಯ್ಕೆಯಾದ ಬಳಿಕ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದು ಕಳೆದ ಮಾರ್ಚ್ ನಲ್ಲಿ ಬಿಜೆಪಿಗೆ ಸೇರಿದ್ದರು. ದಿವ್ಯೆಂದು ಅಧಿಕಾರಿಯು ತಮ್ಲುಕ್ ಕ್ಷೇತ್ರದ ತೃಣಮೂಲ ಸಂಸದರಾಗಿ ಉಳಿದಿದ್ದಾರೆ.

ಮಮತಾರ ತೃಣಮೂಲ ಕಾಂಗ್ರೆಸ್ ಅನ್ನು ಸೋಲಿಸಿ ಅಧಿಕಾರ ಹಿಡಿಯುವ ಭಾರೀ ನಿರೀಕ್ಷೆಯೊಂದಿಗೆ ಪಶ್ಚಿಮ ಬಂಗಾಳಕ್ಕೆ ಕಾಲಿಟ್ಟಿದ್ದ ಬಿಜೆಪಿಯವರಿಗೆ ಮತದಾರರು ಅವಕಾಶ ನೀಡಿದ್ದು ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಚುನಾವಣೆಯ ಬಳಿಕ ಹಿಂಸಾಚಾರ ಭುಗಿಲೆದ್ದಿದ್ದರಿಂದ ಕೇಂದ್ರ ಗೃಹ ಸಚಿವಾಲಯವು ಚುನಾಯಿತರಾದ ಎಲ್ಲಾ 77 ಬಿಜೆಪಿ ಶಾಸಕರಿಗೆ ಕೇಂದ್ರ ಭದ್ರತಾ ರಕ್ಷಣೆ ಒದಗಿಸಿತ್ತು.