ಭೀಮ ಕೊರೆಗಾವ್ ಪ್ರಕರಣ: ಸ್ಟಾನ್ ಸ್ವಾಮಿ ಜಾಮೀನು ಅರ್ಜಿ ತಿರಸ್ಕೃತ

0
418

ಸನ್ಮಾರ್ಗ ವಾರ್ತೆ

ಮುಂಬೈ: ಭೀಮ ಕೊರೆಗಾವ್ ಪ್ರಕರಣದಲ್ಲಿ 83 ವರ್ಷದ ವಯೋವೃದ್ಧ ಫಾ.ಸ್ಟಾನ್ ಸ್ವಾಮಿಯವರ ಜಾಮೀನು ಅರ್ಜಿಯನ್ನು ಎನ್‍ಐಎ ಕೋರ್ಟು ತಳ್ಳಿಹಾಕಿದೆ. ತನ್ನ ಬರಹ, ಆದಿವಾಸಿಗಳ ಹಕ್ಕಿಗಾಗಿ ಕೆಲಸ ಮಾಡಿದ್ದರಿಂದ ಆರೋಪಿಯನ್ನಾಗಿಸಲಾಗಿದೆ ಎಂದು ಅವರು ಆಪಾದಿಸಿದ್ದು ಅವರು ಪಾರ್ಕಿನ್‍ಸನ್ ಸಹಿತ ರೋಗಗಳನ್ನು ಮುಂದಿಟ್ಟು ಜಾಮೀನು ಅರ್ಜಿ ಸಲ್ಲಿಸಿದ್ದರು.

ಸಂಘರ್ಷಕ್ಕೆ ಕಾರಣವಾಗಿದೆ ಎಂದು ಹೇಳಲಾಗುವ ಎಲ್ಗಾರ್ ಪರಿಷತ್‍ನಲ್ಲಿ ಭಾಗವಹಿಸಿಲ್ಲ ಎಂದೂ ಸಿಪಿಐ ಮಾವೋವಾದಿ ಸದಸ್ಯ ಅಲ್ಲ ಎಂದೂ ಎನ್‍ಐಎ ನೀಡಿದ ಸಾಕ್ಷ್ಯಗಳು ಸುರಕ್ಷಾ ವ್ಯವಸ್ಥೆ ಇಲ್ಲದ ತನ್ನ ಲ್ಯಾಪ್‍ಟ್ಯಾಪ್‍‌ನ್ನು ಹ್ಯಾಕ್ ಮಾಡಿ ಸೇರಿಸಿದ್ದೆಂದು ಸ್ವಾಮಿ ಕೋರ್ಟಿನಲ್ಲಿ ಹೇಳಿದರು.

ಆದರೆ, ಸ್ವಾಮಿಗೆ ಮಾವೋವಾದಿ ಸಂಬಂಧ ಇರುವ ಸಂಘಟನೆಯ ಸಹಾಯ ಇತ್ತು. ಸಹ ಆರೋಪಿಗಳೊಂದಿಗೆ ನೂರಕ್ಕೂ ಹೆಚ್ಚು ಇಮೇಲ್ ಹಂಚಿಕೆಗಳನ್ನು ಗಮನಿಸಿದ್ದೇವೆ ಎಂದು ಎನ್‍ಐಎ ಕೋರ್ಟಿಗೆ ತಿಳಿಸಿತು.

ಈ ಹಿಂದೆ ಕೊರೋನ ಹಿನ್ನೆಲೆಯಲ್ಲಿ ವಯಸ್ಸಾದವರಿಗೆ ಜಾಮೀನು ನೀಡಲು ಸುಪ್ರೀಂಕೋರ್ಟು ಶಿಫಾರಸ್ಸು ಮಾಡಿದಾಗಲೂ ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಆಗಲೂ ತಿರಸ್ಕೃತವಾಗಿತ್ತು.