ಕೋವಿಡ್‌ಗೆ ನವವಿವಾಹಿತ ಬಲಿ: ವಿವಾಹದಲ್ಲಿ ಪಾಲ್ಗೊಂಡ 95 ಜನರಿಗೆ ಕೊರೋನ ದೃಢ!

0
1006

ಸನ್ಮಾರ್ಗ ವಾರ್ತೆ

ಪಾಟ್ನಾ: ಮದುವೆ ಕಾರ್ಯಕ್ರಮದಲ್ಲಿ ಬಂದ ಬಹುತೇಕರಿಗೆ ಸೋಂಕು ತಗುಲಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಗುರುಗ್ರಾಮದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬನ ವಿವಾಹ ಇತ್ತೀಚೆಗೆ ನಡೆದಿತ್ತು. ಆದರೆ ವಿವಾಹವಾದ ಎರಡೇ ದಿನಗಳ ಬಳಿಕ ಈತ ಮೃತಪಟ್ಟಿದ್ದು, ವರನಿಗೆ ಸೋಂಕು ತಗುಲಿದ ಲಕ್ಷಣಗಳಿದ್ದರೂ ಆತನ ಕೋವಿಡ್-19 ಪರೀಕ್ಷೆಗೆ ಒಳಪಡಿಸದೆ ಆತನ ಅಂತ್ಯ ಸಂಸ್ಕಾರ ನಡೆಸಲಾಗಿದೆ.

ನಂತರ ಅನುಮಾನಗೊಂಡು ಮದುವೆಯಲ್ಲಿ ಪಾಲ್ಗೊಂಡ ಇತರರ ಪರೀಕ್ಷೆ ನಡೆಸಲಾಗಿದ್ದು, 95 ಜನರಿಗೆ ಕೋವಿಡ್ ಸೋಂಕು ದೃಢವಾಗಿದೆ. ಮದುಮಗ ಜೂನ್ 12 ರಂದು ಸ್ವಗ್ರಾಮಕ್ಕೆ ಆಗಮಿಸಿದ್ದ ಮತ್ತು ಜೂನ್ 15 ರಂದು ಮದುವೆಯಾಗಿತ್ತು. ಮದುಮಗಳಿಗೆ ಸೋಂಕು ತಗುಲಿಲ್ಲವೆಂದು ಕೋವಿಡ್-19 ವರದಿಯಲ್ಲಿ ತಿಳಿದು ಬಂದಿದೆ.

ಈ ಕುರಿತು ಆತಂಕ ವ್ಯಕ್ತ ಪಡಿಸಿದ ಅಧಿಕಾರಿಗಳು ವಿವಾಹದ ಸಂದರ್ಭದಲ್ಲಿ ನೋವೆಲ್ ಕೊರೋನ ವೈರಸ್ ಕುರಿತು ಸರಕಾರವು ಹೊರಡಿಸಿರುವ ಗೈಡ್‌ಲೈನ್‌ನ ಉಲ್ಲಂಘನೆಯಾಗಿದೆ ಎಂದಿದ್ದಾರೆ. ವಿವಾಹದ ಸಂದರ್ಭದಲ್ಲಿ 50 ಜನರಿಗೆ ಮತ್ರ ಪಾಲ್ಗೊಳುವ ಅವಕಾಶವಿದ್ದು ಸಂಪೂರ್ಣ ಮುಖ ಕವಚ ಹಾಕಿಕೊಳ್ಳಬೆರಕೆಂಬ ನಿಯಮವಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.