ಬಿಹಾರದಲ್ಲಿ ಸೀಟು ವಿವಾದ; ರೈಲಿನಲ್ಲಿ ಯುವಕನ ಹತ್ಯೆ

0
900

ಚಪರ, ಜೂ.22: ರೈಲಿನಲ್ಲಿ ಸೀಟು ಕುರಿತ ವಿವಾದದಲ್ಲಿ ಯುವಕನನ್ನು ಇರಿದು ಕೊಲೆ ಮಾಡಲಾಗಿದೆ. ಪವನ್ ಎಕ್ಸ್ ಪ್ರೆಸ್‍ನಲ್ಲಿ ಜನರಲ್ ಬೋಗಿಯಲ್ಲಿ ಬಿಹಾರದ ಚಪರ ಜಂಕ್ಷನ್‍ನಲ್ಲಿ ಘಟನೆ ನಡೆದಿದೆ. ಬಿಹಾರದ ದರ್ಭಾಂಗದಿಂದ ಮುಂಬೈಗೆ ಸಹೋದರ ಮತ್ತು ಸಂಬಂಧಿಕರ ಜತೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಮುಝಪ್ಫರ್ ನಗರದಲ್ಲಿ ಹತ್ತಿದ ವ್ಯಕ್ತಿ ಯುವನಿಗೆ ಸೀಟು ಬಿಟ್ಟುಕೊಡುವಂತೆ ಹೇಳಿದ್ದಾನೆ. ಸೀಟಿನ ಕಾರಣದಿಂದ ಇಬ್ಬರ ನಡುವೆ ಜಗಳವಾಗಿದೆ. ನಂತರ ವ್ಯಕ್ತಿಯನ್ನು ಪೊಲೀಸರು ಕರೆದುಕೊಂಡು ಹೋಗಿದ್ದರು. ಆದರೆ ಹಾಜಿಪುರ ನಿಲ್ದಾಣ ಕಳೆದ ನಂತರ ಆ ವ್ಯಕ್ತಿಯನ್ನು ಬಿಟ್ಟಿದ್ದರು. ನಂತರ ಯುವಕ ರೈಲಿನ ಬಾತ್‍ರೂಮ್ ಬಳಿ ಇರಿತಕ್ಕೊಳಗಾಗಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ ಎಂದು ಯುವಕನ ಸಹೋದರ ಪೊಲೀಸರಿಗೆ ತಿಳಿಸಿದ್ದಾನೆ. ಘಟನೆಯ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಚಾಪರ ಪೊಲೀಸರು ಹೇಳಿದ್ದಾರೆ.