ತೆಲುಗು ದೇಶಂ ಪಕ್ಷದ ರಾಜ್ಯಸಭಾ ಸದಸ್ಯರ ಬಿಜೆಪಿ ವಲಸೆಯ ಬಳಿಕ ಇದೀಗ ಶಾಸಕರ ಬಿಜೆಪಿ ವಲಸೆ

0
828

ವಿಜಯವಾಡ, ಜೂ. 22: ಒಬ್ಬ ಸಂಸದ, ಅಥವಾ ಶಾಸಕರು ಇಲ್ಲದ ಆಂಧ್ರದಲ್ಲಿ ಆಪರೇಷನ್ ಕಮಲ ಎರಡರ ಹಂತಕ್ಕೆ ಚಾಚುತ್ತಿದೆ. ರಾಜ್ಯಸಭಾ ಸದಸ್ಯರನ್ನು ಕರೆ ತರುವಲ್ಲಿ ಯಶಸ್ವಿಯಾದ ಬಿಜೆಪಿಯು ಶಾಸಕರನ್ನು ಕೂಡ ತಮ್ಮೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಟಿಡಿಪಿಯ ಶಾಸಕರಲ್ಲಿ ಮೂರನೆ ಎರಡಂಶ ಶಾಸಕರನ್ನು ಬಿಜೆಪಿಗೆ ಆಪರೇಷನ್ ಕಮಲದ ಮೂಲಕ ತರಲು ಬಿಜೆಪಿ ಯತ್ನಿಸುತ್ತಿದೆ. 175 ಸದಸ್ಯರ ವಿಧಾನಸಭೆಯಲ್ಲಿ ತೆಲುಗು ದೇಶಂ ಪಕ್ಷವು 23 ಶಾಸಕರನ್ನು ಹೊಂದಿದೆ. ತೆಲಂಗಾಣದಲ್ಲಿ ಚಂದ್ರಶೇಖರ ರಾವ್ ಅನುಸರಿಸಿದ ತಂತ್ರವನ್ನು ಬಿಜೆಪಿ ಆಂಧ್ರದಲ್ಲಿ ಪರೀಕ್ಷಿಸುತ್ತಿದೆ. ತೆಲಂಗಾಣದ 18 ಕಾಂಗ್ರೆಸ್ ಶಾಸಕರಲ್ಲಿ 12 ಮಂದಿ ಪಕ್ಷ ತೊರೆದು ಟಿ ಆರ್‍ ಎಸ್‍ ಗೆ ಸೇರ್ಪಡೆಯಾಗಿದ್ದರು.

ವಿಶಾಖಪಟ್ಟಣ ಶಾಸಕ ಮತ್ತು ಮಾಜಿ ಸಚಿವ ಗಂಡ ಶ್ರೀನಿವಾಸ ರಾವ್ ಶಾಸಕರನ್ನು ಬಿಜೆಪಿಗೆ ಕರೆತರುವ ಹೊಣೆಯನ್ನು ಹೊತ್ತಿದ್ದಾರೆ. ಬಿಜೆಪಿಗೆ ಕೈಕೊಟ್ಟು ಪ್ರತಿಪಕ್ಷ ಒಗ್ಗಟ್ಟಿಗೆ ನೇತೃತ್ವ ನೀಡಿದ್ದ ಚಂದ್ರಬಾಬು ನಾಯಿಡು ಟಿಡಿಪಿಯನ್ನು ನಾಶಪಡಿಸುವುದು ಬಿಜೆಪಿಯ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರನ್ನು ಬಿಜೆಪಿ ಈಗಾಗಲೇ ಪಕ್ಷಕ್ಕೆ ಸೇರಿಸಿಕೊಂಡಿದೆ. ಆರು ಮಂದಿ ರಾಜ್ಯಸಭಾ ಸದಸ್ಯರಲ್ಲಿ ಎರಡು ಮಂದಿ ಬಿಜೆಪಿಗೆ ಹೋಗಿದ್ದಾರೆ. ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯಿಡು ವಿದೇಶದಲ್ಲಿರುವ ಸಮಯದಲ್ಲಿ ಬಿಜೆಪಿಯ ಆಪರೇಷನ್ ಕಮಲ ನಡೆದಿದೆ.