ಮಧ್ಯಪ್ರದೇಶದಲ್ಲಿಯೂ ಹಕ್ಕಿ ಜ್ವರ ದೃಢ

0
414

ಸನ್ಮಾರ್ಗ ವಾರ್ತೆ

ಮಾಂಡ್ಸರ್: ಕೇರಳ, ರಾಜಸ್ಥಾನ ಸೇರಿದಂತೆ ಈಗ ಮಧ್ಯಪ್ರದೇಶದಲ್ಲಿಯೂ ಹಕ್ಕಿ ಜ್ವರ ದೃಢಪಟ್ಟಿದ್ದು ಮಧ್ಯಪ್ರದೇಶದಲ್ಲಿ ಮುನ್ನೆಚ್ಚರಿಕೆ ವಹಿಸಲು ಆದೇಶ ಜಾರಿಗೊಳಿಸಲಾಗಿದೆ. ಮಧ್ಯಪ್ರದೇಶದ ಮಾಂಡ್ಸರ್‌ನಲ್ಲಿ ಹಕ್ಕಿಗಳು ಸಾಮೂಹಿಕವಾಗಿ ಸತ್ತು ಬಿದ್ದಿದ್ದು ಹಕ್ಕಿ ಜ್ವರ ವೈರಸ್‍ ಪತ್ತೆಯಾಗಿದೆ.

ಡಿಸೆಂಬರ್ 23 ಮತ್ತು ಜನವರಿ ಮೂರರ ಮಧ್ಯದಲ್ಲಿ ನೂರಾರು ಕಾಗೆಗಳು ಮಾಂಡ್ಸರ್ ಜಿಲ್ಲೆಯಲ್ಲಿ ಸತ್ತು ಬಿದ್ದಿವೆ. ಅದರಿಂದ ಸಂಗ್ರಹಿಸಿದ ಸ್ಯಾಂಪಲ್‍ಗಳಿಂದ ಹಕ್ಕಿ ಜ್ವರ ದೃಢಪಟ್ಟಿದೆ ಎಂದು ಪ್ರಾಣಿ ಸಂರಕ್ಷಣಾ ಇಲಾಖೆ ಅಧಿಕಾರಿ ಡಾ. ಮನೀಶ್ ಇಂಗೊಲೆ ತಿಳಿಸಿದ್ದಾರೆ.

ಹಕ್ಕಿ ಜ್ವರ ದೃಢಪಟ್ಟ ಸ್ಥಳದಿಂದ ಒಂದು ಕಿಲೊಮೀಟರ್ ವ್ಯಾಪ್ತಿಯಲ್ಲಿ ವೈದ್ಯಕೀಯ ತಂಡದಿಂದ ನಿರೀಕ್ಷಣೆ ನಡೆಯುತ್ತಿದೆ. ರೋಗ ಹರಡದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮುಂಜಾಗೃತಾ ಕ್ರಮವನ್ನು ಮಾಡಿಕೊಳ್ಳಬೇಕೆಂದು ಪ್ರಾಣಿ ಸಂರಕ್ಷಣಾ ಇಲಾಖೆ ಸೂಚನೆ ನೀಡಿದೆ.

ಹಕ್ಕಿಗಳಿಗೆ ಬರುವ ಸಾಂಕ್ರಾಮಿಕ ರೋಗ ಹಕ್ಕಿ ಜ್ವರವಾಗಿದೆ. ಎವಿಯನ್ ಇನ್‍ಫ್ಲಾವೆಂಜ ವೈರಸ್ (ಎಚ್5ಎನ್1) ಜ್ವರಕ್ಕೆ ಕಾರಣವಾಗಿದ್ದು, ತ್ವರಿತವಾಗಿ ಈ ವೈರಸ್ ಹರಡುತ್ತದೆ.