ಮಂತ್ರೋಪಕರಣ ಜಾಹೀರಾತುಗಳ ತಡೆಗೆ ಬಾಂಬೆ ಹೈಕೋರ್ಟ್ ಆದೇಶ

0
366

ಸನ್ಮಾರ್ಗ ವಾರ್ತೆ

ಮುಂಬೈ: ಬಳಕೆದಾರರಿಗೆ ಅಭಿವೃದ್ಧಿಯ ಭರವಸೆ ನೀಡುವ ಜಪಮಾಲೆಗಳ ಸಹಿತ ಮಂತ್ರೋಪಕರಣಗಳ ಜಾಹೀರಾತು ತಡೆಯಬೇಕೆಂದು ಬಾಂಬೆ ಹೈಕೋರ್ಟು ಆದೇಶ ನೀಡಿದೆ. ಜಾಹೀರಾತು ನೀಡುವ ಕಂಪೆನಿ, ಚ್ಯಾನೆಲ್‍ಗಳು ಮತ್ತು ಅಭಿನಯಿಸುವ ನಟ ನಟಿಯರ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಹೈಕೋರ್ಟು ನಿರ್ದೇಶ ನೀಡಿದೆ.

ಇಂತಹ ಜಾಹೀರಾತುಗಳನ್ನು ನಿರೀಕ್ಷಿಸುವ ವ್ಯವಸ್ಥೆಯನ್ನು ಮಾಡಬೇಕು. ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ಜಸ್ಟಿಸ್ ತಾನಾಜಿ ನಲ್ವಡೆ, ಮುಕುಂದ್ ಸೆವ್ಲಿಕರ್‌ರಿದ್ದ ಹೈಕೋರ್ಟು ಪೀಠವು ಈ ಗಮನಾರ್ಹ ತೀರ್ಪನ್ನು ನೀಡಿದೆ. ಎಲ್ಲರೂ ಮೂಲಭೂತವಾಗಿ ವಿದ್ಯಾಭ್ಯಾಸ ಹೊಂದಿರುತ್ತಾರೆ ಆದರೆ, ವೈಜ್ಞಾನಿಕೆ ಬೆಳವಣಿಗೆಯಾಗಿಲ್ಲ. ವಿದ್ಯಾಸಂಪನ್ನರೂ ಕೂಡ ಮಂತ್ರ ತಂತ್ರಗಳತ್ತ ಆಕರ್ಷಿತರಾಗುತ್ತಿದ್ದಾರೆ ಎಂದೂ ಕೋರ್ಟು ಹೇಳಿದೆ.