ಪಂಚ ರಾಜ್ಯಗಳ ಚುನಾವಣಾ ಪ್ರಚಾರಕ್ಕೆ 252 ಕೋಟಿ ರೂ. ವ್ಯಯಿಸಿದ ಬಿಜೆಪಿ: ಬಂಗಾಳದಲ್ಲಿಯೇ ಅತಿಹೆಚ್ಚು

0
332

ಸನ್ಮಾರ್ಗ ವಾರ್ತೆ

ದೆಹಲಿ: ಭಾರತೀಯ ಜನತಾ ಪಕ್ಷವು ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಾಗಿ ಒಟ್ಟು 252 ಕೋಟಿ ಖರ್ಚು ಮಾಡಿದೆ. ಈ ಮೊತ್ತದಲ್ಲಿ 151ಕೋಟಿ (ಶೇ.60ರಷ್ಟು) ಮೊತ್ತವನ್ನು ಪಶ್ಚಿಮ ಬಂಗಾಳದಲ್ಲಿ ಖರ್ಚು ಮಾಡಿದೆ. ತೃಣಮೂಲ ಕಾಂಗ್ರೆಸ್ ಆಡಳಿತವನ್ನು ಅಧಿಕಾರದಿಂದ ಕೆಳಗಿಳಿಸಿ, ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೇರಿಸುವ ನಾಯಕರ ಪ್ರಯತ್ನವು ಇಲ್ಲಿ ವಿಫಲವಾಗಿದೆ.

ಬರೊಬ್ಬರಿ 252,02,71,753 ಮೊತ್ತವನ್ನು ಬಿಜೆಪಿ ಚುನಾವಣೆಗಾಗಿ ಖರ್ಚು ಮಾಡಿರುವುದಾಗಿ ವೆಚ್ಚದ ವಿವರಗಳನ್ನು ಚುನಾವಣಾ ಆಯೋಗಕ್ಕೆ ನೀಡಿದೆ.

ಈ ಪೈಕಿ 43.81 ಕೋಟಿ ಅಸ್ಸಾಂನಲ್ಲಿ ಮತ್ತು 4.79 ಕೋಟಿ ಪುದುಚೇರಿ ವಿಧಾನಸಭಾ ಚುನಾವಣೆಗಾಗಿ ಖರ್ಚು ಮಾಡಿದೆ. ತಮಿಳುನಾಡಿನಲ್ಲಿ 22.97 ಕೋಟಿ ಹಾಗೂ ಕೇರಳದ ಚುನಾವಣೆಗಾಗಿ ಬಿಜೆಪಿ 29.24 ಕೋಟಿ ಖರ್ಚು ಮಾಡಿರುವುದಾಗಿ ತಿಳಿಸಿದೆ..