ಊಟಕ್ಕೂ ಕಾಸು ಕೇಳ್ತಿಯಾ?: ಹೊಟೇಲು ಮಾಲಕನಿಗೆ ಬೆದರಿಕೆ ಹಾಕಿದ ಬಿಜೆಪಿ ನಾಯಕರು

0
772

ಸನ್ಮಾರ್ಗ ವಾರ್ತೆ

ಚೆನ್ನೈ: ಹೊಟೇಲಿಗೆ ಹೋಗಿ ಊಟ ಮಾಡಿದ ಮೇಲೆ ಹಣಕೊಡದೆ  ಮೂವರು ಬಿಜೆಪಿ ನಾಯಕರು ಬೆದರಿಕೆ ಹಾಕಿದ ಘಟನೆ ಚೆನ್ನೈ ರಾಯಪೇಟ್ಟದಲ್ಲಿ ನಡೆದಿದೆ.

ಆರೋಪಿ ಬಿಜೆಪಿ ನಾಯಕರಾದ ಟ್ರಿಪ್ಲಿಕನ್ ವೆಸ್ಟ್ ಮಂಡಲ ಕಾರ್ಯದರ್ಶಿ ಭಾಸ್ಕರ್, ಅಧ್ಯಕ್ಷ ಪುರುಷೋತ್ತಮನ್‍ರನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿದ್ದಾರೆ. ಇದೇ ವೇಳೆ ತಪ್ಪಿಸಿಕೊಂಡು ಹೋದ ಇವರ ಗೆಳೆಯ ಸೂರ್ಯ ಎಂಬಾತನ್ನು ಪೊಲೀಸರು ಹುಡುಕುತ್ತಿದ್ದಾರೆ.

ಆರೋಪಿಗಳು ಮದ್ಯಪಾನ ಮಾಡಿ ಬಂದು ಫ್ರೈಡ್ ರೈಸ್ ಕೇಳಿದಾಗ ಅಂಗಡಿ ಬಂದ್ ಮಾಡಲು ಹೊರಟಿದ್ದೇನೆ ಎಂದು ಹೊಟೇಲು ಮಾಲಕ ಹೇಳಿದ್ದರೂ ಒತ್ತಾಯ ಮಾಡಿ ಫ್ರೈಡ್ ರೈಸ್ ತಯಾರಿಸಿದ ಬಳಿಕ  ಊಟ ಮಾಡಿ ಹೊರಟವರನ್ನು ಹೊಟೇಲು ಸಿಬ್ಬಂದಿ ಬಿಲ್‍ನ ಹಣ ಕೊಡಲು ಕೇಳಿದ್ದರು. ಬಿಜೆಪಿ ನಾಯಕರೊಂದಿಗೆ ಹಣ ಕೇಳುವಷ್ಟು ದೊಡ್ಡವನಾದೆಯಾ ಎಂದು ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ.

ಮಾಲಕರು ಹಣ ಕೇಳಿದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾರ ಸಹಾಯಕನಿಗೆ ಕರೆ ಮಾಡುತ್ತೇವೆ.ನಾವು ಬಯಸಿದರೆ ಮುತ್ತಯ್ಯ ಬೀದಿಯಲ್ಲಿ ನಿಮಿಷದೊಳಗೆ ಕೋಮು ಗಲಭೆ ಮಾಡಿಸಲು ನಮಗೆ ಸಾಧ್ಯವಿದೆ ಎಂದು ಹೇಳಿದ್ದಾರೆ. ತದನಂತರ ಹೊಟೇಲ್ ಮಾಲಕ ಪೊಲೀಸರಿಗೆ ಕರೆ ಮಾಡಿ ತಿಳಿಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದುಕೊಂಡಿದ್ದು, ಕೊಲೆ ಬೆದರಿಕೆ ನಾಶನಷ್ಟವುಂಟು ಮಾಡಿದ ಕೇಸನ್ನು ಇವರ ವಿರುದ್ಧ ದಾಖಲಿಸಿದ್ದಾರೆ.